Publish Date: Thu, 07 Mar 2019 (09:18 IST)
Updated Date: Thu, 07 Mar 2019 (09:19 IST)
ಬೆಂಗಳೂರು: ಡಿ ಬಾಸ್ ದರ್ಶನ್ ಅಭಿನಯದ ಯಜಮಾನ ಚಿತ್ರದ ಬಿಡುಗಡೆಯಾಗಿ ನಾಲ್ಕು ದಿನಗಳು ಕಳೆದಿದ್ದು, ಇದೀಗ 50 ಕೋಟಿ ಕ್ಲಬ್ ಸೇರುವತ್ತ ದಾಪುಗಾಲಿಟ್ಟಿದೆ.
ನಾಲ್ಕನೇ ದಿನದ ಕಲೆಕ್ಷನ್ 50 ಕೋಟಿ ದಾಟುವ ನಿರೀಕ್ಷೆ ಮಾಡಲಾಗಿದೆ. ಈಗಾಗಲೇ ಸಿನಿಮಾಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದ್ದು, ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
ಇದೀಗ ನಾಳೆಯಿಂದ ಅಮೆರಿಕಾ, ಕೆನಡಾದಲ್ಲಿ ತೆರೆ ಕಾಣಲು ಸಿದ್ಧವಾಗಿದೆ. ಈಗಾಗಲೇ ಆನ್ ಲೈನ್ ಬುಕಿಂಗ್ ಆರಂಭವಾಗಿದೆ. ಇಲ್ಲಿ ಸಿಕ್ಕ ಯಶಸ್ಸು ವಿದೇಶದಲ್ಲೂ ಸಿಗುವ ನಿರೀಕ್ಷೆಯಲ್ಲಿ ಯಜಮಾನ ತಂಡವಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.