Publish Date: Thu, 07 Mar 2019 (09:13 IST)
Updated Date: Thu, 07 Mar 2019 (09:14 IST)
ಬೆಂಗಳೂರು: ಪೈಲ್ವಾನ್ ಶೂಟಿಂಗ್ ಮುಗಿಸಿಕೊಂಡ ಕಿಚ್ಚ ಸುದೀಪ್ ಇದೀಗ ಹೊಸ ಶಾಲೆಗೆ ಹೊರಟಿದ್ದಾರೆ! ಅಂದರೆ ಮತ್ತೊಂದು ಸಿನಿಮಾ ಶೂಟಿಂಗ್ ಶುರು ಮಾಡಿಕೊಂಡಿದ್ದಾರೆ.
ಇದನ್ನು ಹೊಸ ಶಾಲೆಗೆ ತೆರಳುವ ಅನುಭವಕ್ಕೆ ಹೋಲಿಸಿಕೊಂಡಿರುವ ಕಿಚ್ಚ ಸುದೀಪ್, ತಾನೂ ಮಗುವಿನಂತೆ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಬೇಕಿದೆಯಷ್ಟೇ ಎಂದಿದ್ದಾರೆ.
ಪೈಲ್ವಾನ್ ಬಳಿಕ ಇದೀಗ ಕೋಟಿಗೊಬ್ಬ 3 ಶೂಟಿಂಗ್ ಪ್ರಾರಂಭಿಸಿರುವುದಾಗಿ ಕಿಚ್ಚ ಸುದೀಪ್ ಹೇಳಿಕೊಂಡಿದ್ದಾರೆ. ‘ಪೈಲ್ವಾನ್ ಶೂಟಿಂಗ್ ಮುಗಿಯಿತು. ಇದೀಗ ಕೋಟಿಗೊಬ್ಬ ಶೂಟಿಂಗ್ ಪ್ರಾರಂಭವಾಗಿದೆ. ಇದು ಒಂಥರಾ ಶಾಲೆ ಬದಲಾಯಿಸುವ ಹಾಗೆ. ನಾನೂ ಶಾಲೆಗೆ ಹೋಗುವ ಮಗುವಿನ ಹಾಗೆ ಹೊಸ ವಾತಾವರಣ, ಹೊಸ ತಂಡಕ್ಕೆ ಹೊಂದಿಕೊಳ್ಳಬೇಕಿದೆ’ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.