Select Your Language

Notifications

webdunia
webdunia
webdunia
Sunday, 13 April 2025
webdunia

ಹನಿಮೂನ್ ಫೋಟೋ ಹಾಕಿದ ರಜನಿ ಪುತ್ರ ಸೌಂದರ್ಯ ವಿರುದ್ಧ ಟ್ವಿಟರ್ ಗರಂ ಆಗಿದ್ದೇಕೆ?

ಸೌಂದರ್ಯ ರಜನೀಕಾಂತ್
ಚೆನ್ನೈ , ಸೋಮವಾರ, 18 ಫೆಬ್ರವರಿ 2019 (09:27 IST)
ಚೆನ್ನೈ: ಇತ್ತೀಚೆಗಷ್ಟೇ ಉದ್ಯಮಿ ವಿಶಾಖನ್ ಜತೆಗೆ ಹಸೆಮಣೆ ಏರಿದ ಸೂಪರ್ ಸ್ಟಾರ್ ರಜನೀಕಾಂತ್ ಪುತ್ರಿ ಸೌಂದರ್ಯ ಇದೀಗ ಪತಿ ಜತೆ ಹನಿಮೂನ್ ಮೂಡ್ ನಲ್ಲಿದ್ದಾರೆ.


ಇವರಿಬ್ಬರು ಐಸ್ ಲ್ಯಾಂಡ್ ನಲ್ಲಿ ಹನಿಮೂನ್ ನಲ್ಲಿದ್ದು, ಈ ಸಂದರ್ಭದಲ್ಲಿ ತೆಗೆದ ಕೆಲವು ರೊಮ್ಯಾಂಟಿಕ್ ಫೋಟೋಗಳನ್ನು ಸೌಂದರ್ಯ ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದ್ದರು.

ಆದರೆ ಸೌಂದರ್ಯ ಹನಿಮೂನ್ ಫೋಟೋ ನೋಡಿ ಟ್ವಿಟರಿಗರು ಗರಂ ಆಗಿದ್ದಾರೆ. ಕಾರಣ ಇಡೀ ದೇಶವೇ ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯಿಂದ ಆಕ್ರೋಶದಲ್ಲಿದೆ. ಹುತಾತ್ಮ ಯೋಧರ ಬಗ್ಗೆ ಕಂಬನಿ ಮಿಡಿಯುತ್ತಿದೆ. ಇಂತಹ ಸಂದರ್ಭದಲ್ಲಿ ಹನಿಮೂನ್ ಫೋಟೋಗಳನ್ನು ಹಾಕಿದ್ದಕ್ಕೆ ಸೌಂದರ್ಯ ವಿರುದ್ಧ ಟ್ವಿಟರಿಗರು ಗರಂ ಆಗಿದ್ದಾರೆ.

ನೀವು ಎಂಜಾಯ್ ಮಾಡಿ. ಹನಿಮೂನ್ ಮಾಡಿ. ಅದಕ್ಕೆ ನಮ್ಮ ತಕರಾರಿಲ್ಲ. ಆದರೆ ಹನಿಮೂನ್ ಫೋಟೋ ಹಾಕಲು ಎರಡು ದಿನ ತಡ್ಕೊಳ್ಳಿ. ದೇಶವೇ ದುಃಖದಲ್ಲಿರುವಾಗ ನಿಮ್ಮ ಹನಿಮೂನ್ ಫೋಟೋಗಳನ್ನು ಹಾಕುವುದು ಸರಿಯಲ್ಲ ಎನ್ನುವುದು ಟ್ವಿಟರಿಗರ ವಾದ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ಪರ ಮಾತನಾಡಿದ ಆರೋಪ: ಕಪಿಲ್ ಶರ್ಮಾ ಶೋನಿಂದ ನವಜೋತ್ ಸಿಂಗ್ ಸಿದುಗೆ ಗೇಟ್ ಪಾಸ್?!