Publish Date: Mon, 18 Feb 2019 (09:10 IST)
Updated Date: Mon, 18 Feb 2019 (09:12 IST)
ನವದೆಹಲಿ: ಪುಲ್ವಾಮಾದಲ್ಲಿ ಪಾಕ್ ಪ್ರೇರಿತ ಉಗ್ರರು ಭಾರತೀಯ ಯೋಧರ ಮೇಲೆ ದಾಳಿ ನಡೆಸಿದ ಕೃತ್ಯ ತಿಳಿಯುತ್ತಿದ್ದಂತೇ ಪಾಕಿಸ್ತಾನ ಕ್ರಿಕೆಟಿಗನ ಪತ್ನಿಯೂ ಆಗಿರುವ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾರನ್ನು ಟ್ವಿಟರ್ ನಲ್ಲಿ ಟ್ರೋಲ್ ಮಾಡಲಾಗಿತ್ತು.
ಸಾನಿಯಾ ತಕ್ಷಣವೇ ಟ್ವಿಟರ್ ನಲ್ಲಿ ಘಟನೆ ಬಗ್ಗೆ ಟ್ವೀಟ್ ಮಾಡಲಿಲ್ಲ ಎಂಬುದು ಟ್ರೋಲಿಗರ ಆರೋಪ. ಇದೀಗ ತಮ್ಮನ್ನು ಟ್ರೋಲ್ ಮಾಡಿದವರಿಗೆ ಸುದೀರ್ಘ ಪತ್ರ ಬರೆದು ಸಾನಿಯಾ ತಿರುಗೇಟು ನೀಡಿದ್ದಾರೆ.
ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲುತ್ತೇವೆ ಎಂದು ಟ್ವೀಟ್ ಮಾಡಿರುವ ಸಾನಿಯಾ ಅದರ ಜತೆಗೆ ನಾನು ಘಟನೆ ನಡೆದ ತಕ್ಷಣ ಖಂಡಿಸಿ ಹೇಳಿಕೆ ನೀಡಲಿಲ್ಲ ಎಂದ ಮಾತ್ರಕ್ಕೆ ನನಗೆ ಆ ಘಟನೆ ಬಗ್ಗೆ ಖೇದವಿಲ್ಲ, ಸಂವೇದನೆ ಇಲ್ಲ ಎಂದರ್ಥವಲ್ಲ ಎಂದಿದ್ದಾರೆ.
ನಮ್ಮ ಭಾವನೆಗಳು ಸಾರ್ವಜನಿಕವಾಗಿ ಹೇಳಿದರೆ ಮಾತ್ರ ನಮಗೆ ದೇಶಭಕ್ತಿಯಿದೆ ಎಂದರ್ಥವಲ್ಲ ಎಂದಿರುವ ಸಾನಿಯಾ ಫೆಬ್ರವರಿ 14 ಎಂಬುದು ದೇಶದ ಇತಿಹಾಸದಲ್ಲೇ ಕರಾಳ ದಿನವಾಗಿ ಹೋಯಿತು. ಇಂತಹ ದಿನ ಮತ್ತೆ ಮರುಕಳಿಸದಿರಲಿ ಎಂದು ಪ್ರಾರ್ಥಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ