Select Your Language

Notifications

webdunia
webdunia
webdunia
Sunday, 13 April 2025
webdunia

ಪುಲ್ವಾಮಾ ದಾಳಿಗೆ ವಂದೇ ಭಾರತ್ ಎಕ್ಸ್ ಪ್ರೆಸ್ ಅವಘಡವನ್ನು ಲಿಂಕ್ ಮಾಡಿದ ರಮ್ಯಾಗೆ ಟ್ವಿಟರಿಗರ ತರಾಟೆ

ರಮ್ಯಾ
ಬೆಂಗಳೂರು , ಭಾನುವಾರ, 17 ಫೆಬ್ರವರಿ 2019 (09:18 IST)
ಬೆಂಗಳೂರು: ಪುಲ್ವಾಮಾ ದಾಳಿ ವಿಚಾರದಲ್ಲೂ ಕೇಂದ್ರ ಸರ್ಕಾರವನ್ನು ಟೀಕಿಸಲು ಹೊರಟ ನಟಿ, ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾಗೆ ಟ್ವಿಟರಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.


ಪುಲ್ವಾಮಾ ದಾಳಿ ನಡೆದ ಬಳಿಕ ಪ್ರಧಾನಿ ಮೋದಿ ಚಾಲನೆ ನೀಡಿದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಮೊದಲ ದಿನವೇ ಸಣ್ಣದೊಂದು ಅವಘಡಕ್ಕೀಡಾಗಿತ್ತು. ಇದನ್ನೇ ನೆಪ ಮಾಡಿ ರಮ್ಯಾ ಕೇಂದ್ರ ಸರ್ಕಾರಕ್ಕೆ ಟಾಂಗ್ ಕೊಡಲು ಮುಂದಾಗಿದ್ದರು.

ನಮ್ಮ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಪ್ರಕಾರ ಪುಲ್ವಾಮಾ ದಾಳಿಗೆ ಇದೇ ರೀತಿ ಉತ್ತರ ಕೊಡಬೇಕಿತ್ತು ಎಂದು ರೈಲ್ವೇ ವೈಫಲ್ಯಕ್ಕೂ ಪುಲ್ವಾಮಾ ದಾಳಿಗೂ ಲಿಂಕ್ ಕೊಡಲು ರಮ್ಯಾ ಮುಂದಾಗಿದ್ದರು. ಇದನ್ನು ನೋಡಿ ಹಲವರು ಪ್ರತಿಕ್ರಿಯಿಸಿದ್ದು, ಈ ರೀತಿ ಹುಳುಕು ಹುಡುಕಿ ಕಾಮೆಂಟ್ ಮಾಡಲು ನಿಮಗೆ ನಾಚಿಕೆಯಾಗಲ್ವೇ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಸರಿಯಾಗಿ ಸುದ್ದಿ ತಿಳಿದುಕೊಂಡು ಮಾತನಾಡಿ. ಇಷ್ಟೊಂದು ಕೀಳುಮಟ್ಟಕ್ಕಿಳಿದು ಮಾತನಾಡಲು ನಾಚಿಕೆಯಾಗಲ್ವೇ? ನಮ್ಮ ಇಂಜಿನಿಯರಿಂಗ್ ಸಾಮರ್ಥ್ಯದ ಬಗ್ಗೆಯೇ ಲೇವಡಿ ಮಾಡುತ್ತೀರಾ? ಇದು ಚುನಾವಣೆ ವಿಷಯವಲ್ಲ. ಸಾಧ್ಯವಾದರೆ ನಮ್ಮ ಯೋಧರಿಗೆ ಒಂದೆರಡು ಹನಿ ಕಣ್ಣೀರು ಹಾಕಿ ಎಂದು ರಮ್ಯಾರನ್ನು ಟ್ವಿಟರಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಮುಖಂಡನ ಮನೆಗೆ ನುಗ್ಗಿದ ದುಷ್ಕರ್ಮಿಗಳು ಎಸಗಿದ್ದಾರೆ ಇಂತಹ ಘೋರ ಕೃತ್ಯ