ನನ್ನ ಜೊತೆ ಕಾಂಗ್ರೆಸ್‌ನಲ್ಲಿದ್ದವರು ಬಿಜೆಪಿಗೆ ಬರಬೇಕು ಎಂದ ಮಾಜಿ ಸಿಎಂ!

ಮಂಗಳವಾರ, 12 ಫೆಬ್ರವರಿ 2019 (17:32 IST)
ಕಾಂಗ್ರೆಸ್ ನಲ್ಲಿ ನನ್ನ ಜತೆಯಲ್ಲಿ ಇದ್ದವರು ಈಗ ಬಿಜೆಪಿಗೆ ಬರಬೇಕು. ಹೀಗಂತ ಮಾಜಿ ಸಿಎಂ ಹೇಳಿಕೆ ನೀಡಿದ್ದಾರೆ.
ಮಂಡ್ಯದ ಮದ್ದೂರಿನಲ್ಲಿ ಎಸ್.ಎಂ.ಕೃಷ್ಣ  ಈ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಕಾರ್ಯಕರ್ತರ ಸಭೆಗೆ ಮಂಡ್ಯಕ್ಕೆ ಆಗಮಿಸುತ್ತಿರುವ ಸಂದರ್ಭ ಮಾತನಾಡಿದ ಅವರು, ಲೋಕಸಭೆ ಚುನಾವಣೆ ದೇಶದಲ್ಲಿ ಅತ್ಯಂತ ಮಹತ್ವವಾದದ್ದು. ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಗೆ ಬಂದಿದ್ದೇನೆ. ಯಶಸ್ಸು ಸಿಗುವ ವಿಶ್ವಾಸ ಇದೆ ಎಂದರು.
ನನ್ನ ಜೊತೆ ಕಾಂಗ್ರೆಸ್‌ನಲ್ಲಿದ್ದವರು ಬಿಜೆಪಿಗೆ ಬರಬೇಕು ಅನ್ನೋದು ನನ್ನ ಆಸೆ. ಇಂದು ನಾನು ಆ ಕರೆ ಕೊಡುತ್ತೇನೆ. 
ನಿರಂತರವಾಗಿ ಈ ಬಗ್ಗೆ ಬೆಂಬಲಿಗರ ಜೊತೆ ಮಾತನಾಡುತ್ತಿದ್ದೇನೆ ಎಂದರು.

ಸುಮಲತ ಅಂಬರೀಷ್ ಬಿಜೆಪಿಗೆ ಬರುವ ವಿಚಾರ ನನಗೆ ಗೊತ್ತಿಲ್ಲ. ನಮ್ಮ ಗಮನವೆಲ್ಲ ಲೋಕಸಭೆ ಚುನಾವಣೆಗೆ ಕೇಂದ್ರೀಕೃತವಾಗಿದೆ. ಬಿಜೆಪಿಗೆ ದೊಡ್ಡ ಬೆಂಬಲ ಸಿಗುವ ನಿರೀಕ್ಷೆ ಇದೆ ಎಂದರು.



ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಎಂಪಿ ಟಿಕೆಟ್ ಆಗ್ರಹಿಸಿ ನಡೆಯಿತು ಪಾದಯಾತ್ರೆ