ನವದೆಹಲಿ : ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್ ವ್ಯವಹಾರ ಸುಲಭವಾಗಿರುವಂತೆ, ವಂಚನೆ ಪ್ರಕರಣಗಳು ಕೂಡ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಎಸ್.ಬಿ.ಐ. ತನ್ನ ಗ್ರಾಹಕರಿಗೆ ಎಚ್ಚರಿಕೆಯೊಂದನ್ನು ನೀಡಿದೆ.
ಇತ್ತೀಚೆಗೆ ಎಟಿಎಂ ಕಾರ್ಡ್ ಅಥವಾ ಡೆಬಿಟ್/ಕ್ರೆಡಿಟ್ ಕಾರ್ಡ್ ಗಳ ಡೇಟಾ ಕದಿಯುವ ವಂಚಕರ ಸಂಖ್ಯ ಹೆಚ್ಚಾಗಿದೆ. ಆದ್ದರಿಂದ ಎಟಿಎಂ ಕಾರ್ಡ್ ಗಳ ಸ್ಕಿಮ್ಮಿಂಗ್ ನಿಂದ ನಿಮ್ಮ ಹಣ ಕಳುವಾದರೆ ಈ ಬಗ್ಗೆ ದೂರು ನೀಡಿದ ಮೂರು ದಿನಗಳಲ್ಲಿ ನಿಮ್ಮ ಹಣ ವಾಪಸ್ ಮಾಡಲಾಗುತ್ತದೆ ಎಂದು ಎಸ್.ಬಿ.ಐ. ತಿಳಿಸಿದೆ.
ಫೋನ್ ಮೂಲಕ ಅಥವಾ ಎಸ್ ಎಂಎಸ್, ಟ್ವೀಟರ್ ಮೂಲಕವೂ ದೂರು ದಾಖಲಿಸಲು ಅವಕಾಶವಿದೆ. ಎಸ್‌ಎಂಎಸ್ ಮೂಲಕ ದೂರು ದಾಖಲಿಸುವವರು Problem ಎಂದು ಟೈಪ್ ಮಾಡಿ 9212500888 ಗೆ ಕಳುಹಿಸಬೇಕಾಗುತ್ತದೆ. ಟ್ವಿಟ್ಟರ್ ಮೂಲಕ ದೂರು ದಾಖಲಿಸುವವರು ಈ ಕುರಿತ ಎಸ್.ಬಿ.ಐ. ಟ್ವಿಟ್ಟರ್ ಹ್ಯಾಂಡಲ್ ಅಕೌಂಟ್ ( Twitter@SBICard_Connect) ಮೂಲಕ ಸಂಪರ್ಕಿಸಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.