Select Your Language

Notifications

webdunia
webdunia
webdunia
webdunia

ಎಂಪಿ ಟಿಕೆಟ್ ಆಗ್ರಹಿಸಿ ನಡೆಯಿತು ಪಾದಯಾತ್ರೆ

ಎಂಪಿ ಟಿಕೆಟ್ ಆಗ್ರಹಿಸಿ ನಡೆಯಿತು ಪಾದಯಾತ್ರೆ
ದಾವಣಗೆರೆ , ಮಂಗಳವಾರ, 12 ಫೆಬ್ರವರಿ 2019 (17:11 IST)
ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭಗೊಂಡಿರುವಂತೆ ಟಿಕೆಟ್ ಆಕಾಂಕ್ಷಿಗಳು ಟಿಕೆಟ್ ಗಾಗಿ ಒತ್ತಡ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಏತನ್ಮಧ್ಯೆ ಮಾಜಿ ಸಚಿವರೊಬ್ಬರ ಬೆಂಬಲಿಗರು ಪಾದಯಾತ್ರೆ ನಡೆಸಿದ್ದಾರೆ.

ಮಾಜಿ ಸಚಿವ ಮಲ್ಲಿಕಾರ್ಜುನ್ ಗೆ ಎಂಪಿ ಟಿಕೆಟ್ ನೀಡಲು ಆಗ್ರಹಿಸಿ ಪಾದಯಾತ್ರೆ ನಡೆಯಿತು. ದಾವಣಗೆರೆಯ ರೇಣುಕಾ ಮಂದಿರದಿಂದ ಮಲ್ಲಿಕಾರ್ಜುನ್ ಮನೆಗೆ ಕಾರ್ಯಕರ್ತರು ಪಾದಯಾತ್ರೆಯಲ್ಲಿ ತೆರಳಿದರು.

ಮಾಜಿ ಶಾಸಕರು, ಕಾರ್ಯಕರ್ತರ ಸಮ್ಮುಖದಲ್ಲಿ ಪಾದಯಾತ್ರೆ ನಡೆಯಿತು. ಬೇಕೆ ಬೇಕು ಮಲ್ಲಣ್ಣ ಬೇಕು ಎಂದು ಘೋಷಣೆ ಕೂಗಿದ ಕಾರ್ಯಕರ್ತರು ಗಮನ ಸೆಳದರು.  

ಮಲ್ಲಿಕಾರ್ಜುನ್ ಒಪ್ಪಿಸಲು ಆಗಮಿಸಿದ ಮಾಜಿ ಶಾಸಕರಾದ ವಡ್ನಾಳ್ ರಾಜಣ್ಣ, ರಾಜೇಶ್, ಶಾಂತನಗೌಡ ಸೇರಿದಂತೆ
ಸಾವಿರಾರು ಕಾರ್ಯಕರ್ತರು ಮಲ್ಲಿಕಾರ್ಜುನ್ ಅಭ್ಯರ್ಥಿಯಾಗಲು ಒತ್ತಾಯ ಮಾಡಿದರು.




Share this Story:

Follow Webdunia kannada

ಮುಂದಿನ ಸುದ್ದಿ

ರಥರಪ್ತಮಿ ಉತ್ಸವದ ಸಡಗರ ಎಲ್ಲಿದೆ?