Select Your Language

Notifications

webdunia
webdunia
webdunia
webdunia

ರಥರಪ್ತಮಿ ಉತ್ಸವದ ಸಡಗರ ಎಲ್ಲಿದೆ?

ರಥರಪ್ತಮಿ ಉತ್ಸವದ ಸಡಗರ ಎಲ್ಲಿದೆ?
ಮಂಡ್ಯ , ಮಂಗಳವಾರ, 12 ಫೆಬ್ರವರಿ 2019 (15:50 IST)
ರಥಸಪ್ತಮಿ ದಿನ ಪವಿತ್ರ ಕಲ್ಯಾಣಿಯಲ್ಲಿ ಮಿಂದೆದ್ದ ಭಕ್ತರು, ದೇವರ ದರ್ಶನ ಪಡೆದು ಪುನೀತರಾದರು.

ಮೇಲುಕೋಟೆಯಲ್ಲಿ ರಥಸಪ್ತಮಿ ಉತ್ಸವ ಕಳೆಗಟ್ಟಿದೆ. ವಿಜೃಂಭಣೆಯಿಂದ ಶ್ರೀ ಚಲುವನಾರಾಯಣಸ್ವಾಮಿ ರಥಸಪ್ತಮಿ ಉತ್ಸವ ನಡೆಯಿತು.

ರಥ ಸಪ್ತಮಿ ದಿನದಂದು ಪವಿತ್ರ ಕಲ್ಯಾಣಿಯಲ್ಲಿ ಮಿಂದೆದ್ದ ಭಕ್ತರು, ಶ್ರೀ ಚಲುವನಾರಾಯಣ ಸ್ವಾಮಿ ವಿಗ್ರಹಕ್ಕೆ ವಿಶೇಷ  ಅಲಂಕಾರ ಮಾಡಿರುವುದನ್ನು ನೋಡಿ, ಪೂಜೆಸಲ್ಲಿಕೆ ಮಾಡಿದರು.

ಪೂಜೆ ಬಳಿಕ ಮೇಲುಕೋಟೆಯ ರಾಜಬೀದಿಗಳಲ್ಲಿ ಸಾಗಿದ ಶ್ರೀ ಚಲುವನಾರಾಯಣಸ್ವಾಮಿ ಉತ್ಸವ ಭಕ್ತರ ಗಮನ ಸೆಳೆಯಿತು.
ಉತ್ಸವದಲ್ಲಿ ವಿವಿಧ ಕಲಾತಂಡಗಳು ಭಾಗಿಯಾಗಿದ್ದವು.

ಡೊಳ್ಳುಕುಣಿತ, ವೀರಗಾಸೆ, ಪೂಜೆಕುಣಿತ ಸೇರಿದಂತೆ ದೇಶದ ವಿವಿಧೆಡೆಗಳಿಂದ ಆಗಮಿಸಿದ್ದ 50ಕ್ಕೂ ಹೆಚ್ಚು ಕಲಾತಂಡಗಳು ಭಾಗಿಯಾಗಿದ್ದವು.
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆ ಶ್ರೀ ಕ್ಷೇತ್ರದಲ್ಲಿ ಭಕ್ತರ ದಂಡೇ ನೆರೆದಿತ್ತು.




Share this Story:

Follow Webdunia kannada

ಮುಂದಿನ ಸುದ್ದಿ

ಕೆಲಸ ಮಾಡ್ತಿದ್ದ ಮಹಿಳೆಯರಿಗೆ ಒಬ್ಬೊಬ್ಬರಾಗಿ ಮನೆಗೆ ಬಾ ಅಂತ ಕರೆಯುತ್ತಿದ್ದ ಕಾಮುಕ ಅಧಿಕಾರಿ?