ಬೆಂಗಳೂರು: ವಿಜಯಪುರದ ಕೆಲವು ಗ್ರಾಮದ ರೈತರಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡಿರುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಗೃಹಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ವಿಜಯಪುರ ಜಿಲ್ಲೆಯ ಹೊನವಾಡದಲ್ಲಿ ಕೆಲವು ರೈತರಿಗೆ ವಕ್ಫ್ ಬೋರ್ಡ್ ತನ್ನ ಆಸ್ತಿ ಎಂದು ನೋಟಿಸ್ ನೀಡಿದೆ. ಇದರ ಬಗ್ಗೆ ಉತ್ತರಿಸಲು ಎರಡು ದಿನಗಳ ಕಾಲಾವಕಾಶವನ್ನೂ ನೀಡಿದೆ. ಇದು ಅಲ್ಲಿನ ರೈತರನ್ನು ಕಂಗಾಲು ಮಾಡಿದೆ. ಇಷ್ಟು ದಿನ ಉಳುಮೆ ಮಾಡಿದ್ದ ಜಮೀನು ವಕ್ಫ್ ಬೋರ್ಡ್ ತನ್ನದೆಂದು ನೋಟಿಸ್ ನೀಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹಸಚಿವ ಜಿ ಪರಮೇಶ್ವರ್, ವಕ್ಫ್ ಬೋರ್ಡ್ ನೀಡಿದ ನೋಟಿಸ್ ಬಗ್ಗೆ ಎಲ್ಲಾ ಪರಿಶೀಲನೆ ಮಾಡುತ್ತೇವೆ. ಸರ್ಕಾರ, ಕಂದಾಯ ಇಲಾಖೆ ಈ ಬಗ್ಗೆ ಪರಿಶೀಲನೆ ನಡೆಸಲಿದೆ. ಪರಿಶೀಲನೆ ಮಾಡಿ ಅದರಲ್ಲಿ ಹಳೆಯ ರೆಕಾರ್ಡ್ ಗಳೇನಿದೆ ಅದರ ಆಧಾರದ ಮೇಲೆ ನಿರ್ಧಾರ ಮಾಡುತ್ತಾರೆ. ನೋಟಿಸ್ ಕೊಟ್ಟಿದ್ದು ಇರಬಹುದು, ಅದರದ್ದು ಏನೂ ತೊಂದರೆಯಿಲ್ಲ ಎಂದಿದ್ದಾರೆ.
ವಿಜಯಪುರದಲ್ಲಿ ಸುಮಾರು 15 ಸಾವಿರ ಎಕರೆ ತನಗೆ ಸೇರಿದ್ದು ಎಂದು ವಕ್ಫ್ ಬೋರ್ಡ್ ಅವಕಾಶ ಮಂಡಿಸುತ್ತಿದೆ. ಈ ಬಗ್ಗೆ ಕೆಲವರು ರೈತರಿಗೆ ಈಗಾಗಲೇ ನೋಟಿಸ್ ಕೂಡಾ ನೀಡಲಾಗಿದೆ. ಇದರ ಬಗ್ಗೆ ಸಾಕಷ್ಟು ಆಕ್ರೋಶ ಕೇಳಿಬಂದಿದೆ. ಸಂಸದ ತೇಜಸ್ವಿ ಸೂರ್ಯ ಕೂಡಾ ಈ ಬಗ್ಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.