Select Your Language

Notifications

webdunia
webdunia
webdunia
webdunia

ವಿಜಯಪುರದಲ್ಲಿ 10 ಸಾವಿರ ಎಕರೆ ವಕ್ಫ್ ಬೋರ್ಡ್ ಗೆ: ಸಚಿವ ಜಮೀರ್ ಆದೇಶಕ್ಕೆ ಹಿಂದೂಗಳ ಪ್ರತಿಭಟನೆ

Zameer Ahmed Khan

Krishnaveni K

ವಿಜಯಪುರ , ಮಂಗಳವಾರ, 15 ಅಕ್ಟೋಬರ್ 2024 (11:30 IST)
ವಿಜಯಪುರ: ವಕ್ಫ್ ಬೋರ್ಡ್ ತಿದ್ದುಪಡಿ ಬಿಲ್ ಚರ್ಚೆಯಲ್ಲಿರುವಾಗಲೇ ವಿಜಯಪುರದಲ್ಲಿ ವಕ್ಫ್ ಬೋರ್ಡ್ ಸುಮಾರು 10 ಸಾವಿರ ಎಕರೆ ತನ್ನದು ಎಂದು ಹೇಳಿಕೊಳ್ಳುತ್ತಿದ್ದು, ಸಚಿವ ಜಮೀರ್ ಅಹ್ಮದ್ ಆಸ್ತಿ ಸರ್ವೇಗೆ ಆದೇಶ ನೀಡಿದ್ದಾರೆ.

ವಿಜಯಪುರದಲ್ಲಿ ಸುಮಾರು 10 ಸಾವಿರ ಎಕರೆ ವಕ್ಫ್ ಬೋರ್ಡ್ ಗೆ ಸೇರಿದ್ದು ಎಂದು ವಕ್ಫ್ ಬೋರ್ಡ್ ಹೇಳಿಕೊಳ್ಳುತ್ತಿದೆ. ಇದರಲ್ಲಿ ಕಂದಾಯ ಇಲಾಖೆಯ 2148 ಎಕರೆ, ಗ್ರಾಮೀಣಾಭಿವೃದ್ಧಿ ಇಲಾಖೆಯ 1012 ಎಕರೆ, ನಗರಾಭಿವೃದ್ಧಿ ಇಲಾಖೆ 322 ಎಕರೆ ಜಮೀನು ಒಳಗೊಂಡಿದೆ.

ಇದೆಲ್ಲವೂ ವಕ್ಫ್ ಆಸ್ತಿ ಎಂದು ಸರ್ವೇ ಮಾಡಲು ಸಚಿವ ಜಮೀರ್ ಅಹ್ಮದ್ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. 45 ದಿನಗಳೊಳಗಾಗಿ ಸರ್ವೇ ನಡೆಸಲು ಆದೇಶ ನೀಡಿದ್ದಾರೆ. ಈಗಾಗಲೇ ಭೂಮಿ ಸರ್ವೇ ಬಗ್ಗೆ ನೋಟಿಸ್ ಪಡೆದವರು ಆತಂಕಕ್ಕಕೊಳಗಾಗಿದ್ದಾರೆ. ಇಂಧೀಕರಣ ನಡೆಸಿ ಪಹಣಿಯಲ್ಲಿ ವಕ್ಫ್ ಹೆಸರು ಸೇರಿಸುವುದು. ಫ್ಲಾಗಿಂಗ್ ನಡೆಸಿ ವಕ್ಫ್ ಆಸ್ತಿ ತನ್ನದೆಂದು ಘೋಷಿಸಿಕೊಂಡು ವಕ್ಫ್ ಜಮೀನು ಮಾರಾಟವಾಗದಂತೆ ಫ್ಲಾಗಿಂಗ್ ಮಾಡಲು ಸಚಿವರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಇದು ಹಿಂದೂ ಸಂಘಟನೆಗಳ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಇದರ ವಿರುದ್ಧ ಇಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಿಟಿ ರವಿ ಮತ್ತು ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಕ್ಫ್ ವಿಚಾರಕ್ಕೆ ಬಂದರೆ ನಿಮ್ಮ ಸಿಡಿ ಬಿಡುಗಡೆ ಮಾಡ್ತೀವಿ: ಬಸನಗೌಡ ಯತ್ನಾಳ್ ಗೆ ಮುಸ್ಲಿಂ ಮುಖಂಡರ ಎಚ್ಚರಿಕೆ