Publish Date: Wed, 23 Oct 2024 (17:04 IST)
Updated Date: Wed, 23 Oct 2024 (17:07 IST)
ವಿಜಯಪುರ: ಇಲ್ಲಿ ನಡೆಯುತ್ತಿರುವ ಪ್ರದರ್ಶನದ ವೇಖೆ ರೇಂಜರ್ ಸ್ವಿಂಗ್ ರೈಡ್ನಿಂದ 21 ವರ್ಷದ ಯುವತಿ ಬಿದ್ದು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
ವಿಜಯಪುರ ನಗರದ ನವಭಾಗ್ ರಸ್ತೆಯಲ್ಲಿರೋ ಫಿಶ್ ಟನಲ್ ಎಕ್ಪೋದಲ್ಲಿ ಈ ಅವಘಡವೊಂದು ಸಂಭವಿಸಿದೆ. ಮೃತ ಯುವತಿಯನ್ನು 21 ವರ್ಷ ಯುವತಿ ನಿಖಿತಾ ಬಿರಾದರ್ ಎಂದು ಗುರುತಿಸಲಾಗಿದೆ.
ಮೂಲಗಳ ಪ್ರಕಾರ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ಶಿಕ್ಷಕ ಅರವಿಂದ ಬಿರಾದರ ಪತ್ನಿ ಗೀತಾ ಪುತ್ರಿ ನಿಖಿತಾ ಬಿರಾದರ ಹಾಗೂ ನೆರೆಯ ಮನೆ ಮಂದಿ ಅಕ್ಟೋಬರ್ 20ರಂದು ಆಗಮಿಸಿದ್ದರು. ಈ ವೇಳೆ ನಿಖಿತಾ ಹಾಗೂ ಆಕೆಯ ಇಬ್ಬರು ಗೆಳೆತಿಯರು ರೇಂಜರ್ ಸ್ವಿಂಗ್ ನಲ್ಲಿ ಕುಳಿತಿದ್ದರು.
ಈ ವೇಳೆ ರೇಂಜರ್ನಲ್ಲಿ ಕುಳಿತುಕೊಳ್ಳುವಾಗ ನಿಖಿತಾ ತಾಯಿ ಆಫರೇಟ್ ಬಳಿ ಎಲ್ಲವೂ ಸರಿಯಾಗಿದೆಯಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಆಗ ಆರಪೇಟರ್ ರಮೇಶ ರಾಯ್ ಎಲ್ಲ ಸರಿಯಾಗಿದೆ ಎಂದು ಹೇಳಿದ್ದ.
ರೇಂಜರ್ ಸ್ವಿಂಗ್ ಆರಂಭವಾಗುತ್ತಿದ್ದಂತೆ ನಿಖಿತಾ ಕುಟುಂಬದವರು ಹಾಗು ಆಕೆ ಗೆಳತಿ ರೇಂಜರ್ ಸ್ವಿಂಗ್ ನಲ್ಲಿ ಕುಳಿತಿದ್ದವರ ವಿಡಿಯೋ ಮಾಡುತ್ತಿದ್ದರು. ರೇಂಜರ್ ಸ್ವಿಂಗ್ ಆನ್ ಆಗಿ ತೆಲೆ ಕೆಳಗಾಗಿ ಮಾಡುತ್ತಿದ್ದಂತೆ ಅದರಲ್ಲಿದ್ದವರು ಭಯದಿಂದ ಕಿರುಚಾಡಿದರು. ಮಕ್ಕಳು ಕಿರುಚಿಕೊಳ್ಳುತ್ತಲೇ ನಿಖಿತಾ ತಾಯಿ ಎಲ್ಲರೂ ಭಯಗೊಂಡಿದ್ದಾರೆ. ರೇಂಜರ್ ಸ್ವಿಂಗ್ ಬಂದ್ ಮಾಡಿ ಎಂದು ಆಪರೇಟರ್ ಗೆ ಪರಿ ಪರಿಯಾಗಿ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದಾರೆ. ಆದರೆ ಆವರ ಮಾತನ್ನು ಆಪರೇಟರ್ ರಮೇಶ್ ರಾಯ್ ಕೇಳಿಲ್ಲ.
ಇದೇ ವೇಳೆ ನಿಖಿತಾಗೆ ಹಾಕಿದ್ದ ಸೇಪ್ಟಿ ಬೆಲ್ಟ್ ಸಡಿಲಾಗಿ ಕಟ್ ಆಗಿದೆ. ಕೂಡಲೇ ಆಕೆ ಮೇಲಿಂದ ಕೆಳಗೆ ಬಿದ್ದಿದ್ದಾಳೆ. ಈ ಹಿನ್ನೆಲೆಯಲ್ಲಿ ತಲೆ ಹಾಗೂ ಕಾಲುಗಳಿಗೆ ಗಂಭೀರ ಗಾಯವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ನಿಖಿತಾ ಕೊನೆಯುಸಿರೆಳೆದಿದ್ದಾಳೆ.