Select Your Language

Notifications

webdunia
webdunia
webdunia
webdunia

ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ

High-tech prostitution using young women from the outer state
bangalore , ಭಾನುವಾರ, 8 ಮೇ 2022 (20:04 IST)
ಹೊರ ರಾಜ್ಯದ ಯುವತಿಯರನ್ನು ಬಳಸಿಕೊಂಡು ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಘಟನೆ ಚಿತ್ರದುರ್ಗದಲ್ಲಿ ಕಂಡು ಬಂದಿದೆ.. ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಹಿಂಭಾಗದ ಲಾಡ್ಜ್ ಮೇಲೆ ಮೈಸೂರು ಒಡನಾಡಿ ಸೇವಾ ಸಂಸ್ಥೆ ಪೊಲೀಸರ ಸಹಕಾರದೊಂದಿಗೆ ದಾಳಿ ನಡಿಸಿ ಮೂವರು ಪುರುಷರು, ಓರ್ವ ಯುವತಿಯನ್ನು ವಶಕ್ಕೆ ಪಡೆದಿದ್ದಾರೆ..ಮೈಸೂರು ಒಡನಾಡಿ ಸಂಸ್ಥೆ ಖಚಿತ ಮಾಹಿತಿ ಪಡೆದು ಚಿತ್ರದುರ್ಗ ಡಿಸಿಐಬಿ ಇನ್ಸ್​​ಪೆಕ್ಟರ್ ಕಿರಣ್ ಕುಮಾರ್ ನೇತೃತ್ವದಲ್ಲಿ ಪ್ರಜ್ವಲ್ ಲಾಡ್ಜ್ ಮೇಲೆ ದಾಳಿ ನಡೆಸಲಾಯ್ತು.. ಈ ವೇಳೆ ಲಾಡ್ಜ್ ಮ್ಯಾನೇಜರ್ ಹಗ್ಗದ ಸಹಾಯದಿಂದ ಜಿಗಿದು ಓಡಿ ಹೋಗಲು ಯತ್ನಿಸಿದಾಗ, ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ಲಾಡ್ಜ್ ಒಳಗೆ ಹೋಗಿ ಪರಿಶೀಲನೆ ನಡೆಸಿದಾಗ ಲಾಡ್ಜ್ನ ಟಾಯ್ಲೆಟ್ ರೂಮಿನಲ್ಲಿ ಹೊರ ನೋಟಕ್ಕೆ ಗೋಡೆಯಂತೆ ಕಾಣಿಸುವ, ಗೋಡೆಯ ಒಳಗೆ ಅಡಗುತಾಣ ನಿರ್ಮಿಸಿಕೊಂಡು ಈ ದಂಧೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಡ್ ಸಿಗದೇ ಮಹಿಳೆಯರ ಪರದಾಟ