Select Your Language

Notifications

webdunia
webdunia
webdunia
webdunia

ಅವಾಂತರ ಸೃಷ್ಟಿಸಿದ ಮಳೆರಾಯ

ಅವಾಂತರ ಸೃಷ್ಟಿಸಿದ ಮಳೆರಾಯ
ಗದಗ , ಭಾನುವಾರ, 8 ಮೇ 2022 (19:51 IST)
ಗದಗ ಜಿಲ್ಲೆಯಲ್ಲಿ ಹಲವೆಡೆ ತಡರಾತ್ರಿ ದಾರಾಕಾರ ಮಳೆ ಸುರಿದಿದೆ. ಗಾಳಿ ಮಳೆ ರಭಸಕ್ಕೆ ಮನೆ ಮೇಲ್ಛಾವಣಿ ತಗಡುಗಳು ಹಾರಿ ಹೋಗಿದ್ದು, ಕುಟುಂಬಸ್ಥರಲ್ಲಿ ಆತಂಕ ಉಂಟಾಗಿದೆ. ಗದಗ ನಗರದ ಖಾನತೋಟ, ನಾಗಲಿಂಗ ನಗರ ಸೇರಿದಂತೆ ಅನೇಕ ಕಡೆ ಮಳೆ ಅವಾಂತರ ಸೃಷ್ಟಿಸಿದೆ. ಗೃಹೋಪಯೋಗಿ ವಸ್ತುಗಳು ನೀರಲ್ಲಿ ಮುಳುಗಡೆಯಾಗಿದ್ದು, ಜನ ರಾತ್ರಿ ಇಡಿ ಜಾಗರಣೆ ಮಾಡುವಂತಾಗಿದೆ. ನಗರದ ಜನತಾ ಕಾಲೋನಿಯಲ್ಲಿ ಬೃಹತ್ ಮರವೊಂದು ತಳ್ಳೊಗಾಡಿ ಹಾಗೂ ಮನೆಗೆ ವಾಲಿ ನಿಂತ ಪರಿಣಾಮ ಜನರಲ್ಲಿ ಆತಂಕ ಮನೆ ಮಾಡಿದೆ. ಜಿಲ್ಲೆಯ ಅನೇಕ ಕಡೆಗಳಲ್ಲಿ ಮರ & ವಿದ್ಯುತ್ ಕಂಬಗಳು ಧರೆಗುರುಳಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ 5 ದಿನ ಮಳೆ ಮುಂದುವರಿಕೆ