Select Your Language

Notifications

webdunia
webdunia
webdunia
webdunia

ಹಾರಿಹೋದ ಮೇಲ್ಚಾವಣಿ, ಕುಸಿದ ಮನೆ ಗೋಡೆ

The blown roof
bangalore , ಭಾನುವಾರ, 8 ಮೇ 2022 (19:54 IST)
ರಾಜ್ಯದಲ್ಲಿ ರಾತ್ರಿ‌ ಹಲವೆಡೆ ಬಾರೀ ಮಳೆ ಸುರಿದಿದ್ದು, ಬೇಸಿಗೆಯ ಬಿಸಿಲಿನ ಝಳಕ್ಕೆ ನಲುಗಿದ್ದ ಜನತೆಗೆ ಮಳೆ ತಂಪೆರೆದಿದೆ. ಆದರೆ ಕೆಲ ಭಾಗದಲ್ಲಿ ಸುರಿದ ಭಾರಿ ಮಳೆ ತರಾವರಿ ಅವಾಂತರ ಸೃಷ್ಟಿಮಾಡಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಎಂ.ಹೊಸೂರು‌ ಗ್ರಾಮದಲ್ಲಿ ರಾತ್ರಿ ಸುರಿದ ಮಳೆಗೆ ಮನೆ ಮೇಲ್ಚಾವಣಿ ಹಾರಿ ಹೋಗಿದ್ದು, ಮನೆ ಗೋಡೆ ಕುಸಿದಿದೆ. ಉಮೇಶ್ ಎಂಬುವವರಿಗೆ ಸೇರಿದ ಮನೆ ಇದಾಗಿದ್ದು, ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯಲ್ಲಿದ್ದ ವಸ್ತುಗಳೆಲ್ಲವೂ ಸಂಪೂರ್ಣ ಹಾನಿಯಾಗಿದೆ. ಸಂತ್ರಸ್ತರು ಸೂಕ್ತ ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅವಾಂತರ ಸೃಷ್ಟಿಸಿದ ಮಳೆರಾಯ