Select Your Language

Notifications

webdunia
webdunia
webdunia
webdunia

‘ಪ್ರಚೋದನಕಾರಿ ಭಾಷಣದ ಹಿಂದೆ ಮೌಲ್ವಿಯ ಕೈವಾಡವಿದೆ’

Maulvi's hand behind provocative speech
bangalore , ಭಾನುವಾರ, 8 ಮೇ 2022 (19:45 IST)
ಕವಲಂದೆ ಛೋಟಾ ಪಾಕಿಸ್ತಾನ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯಿಸಿದ್ದು,ಇದು ಮುಸ್ಲಿಮರ ಸೊಕ್ಕಿನ ವರ್ತನೆ. ಮೌಲ್ವಿಯ ಪ್ರಚೋದನಕಾರಿ ಭಾಷಣದಿಂದ ಇದಾಗಿದೆ.ಈ ಪ್ರಕರಣದ ಹಿಂದೆ ಮೌಲ್ವಿಯ ಕೈವಾಡ ಇದೆ ಎಂದ್ರು.ನಮ್ಮ ಹೋರಾಟ ಆಜಾನ್ ವಿರುದ್ಧ ಅಲ್ಲ,ಅದು ಹೊರ ಸೂಸುವ ಶಬ್ಧದ ವಿರುದ್ದ.ಸುಪ್ರಭಾತ ಅಭಿಯಾನ ಯಾವುದೇ ಕಾರಣಕ್ಕೂ ನಿಲ್ಲಲ್ಲ.ಮೇ 9ರಿಂದ ಎಲ್ಲಾ ದೇವಸ್ಥಾನಗಳಲ್ಲೂ ಸುಪ್ರಭಾತ ಅಭಿಯಾನ ಮಾಡಲಾಗುತ್ತದೆ.ರಾಜ್ಯದಲ್ಲಿ ಶಾಂತಿ ಭಂಗವಾಗುತ್ತಿರುವುದು ಮುಸ್ಲಿಂರಿಂದ.ಒಂದು ವೇಳೆ ಶಾಂತಿ ಕದಡಿದರೆ ಅದಕ್ಕೆ ಸರ್ಕಾರವೇ  ನೇರ ಹೊಣೆಯಾಗಲಿದೆ ಎಂದು ಹೇಳಿದರು.ಕವಲಂದೆ ಪ್ರಕರಣದ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು.ಇದಲ್ಲದಿದ್ದರೆ ಹಿಂದೂ ಸಂಘಟನೆಗಳಿಂದ ಕವಲಂದೆ ಚಲೋ ಮಾಡಲಾಗುತ್ತೆ ಎಂದು ಎಚ್ಚರಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ MLC ಪುತ್ರನ ಕಾರಿನ ಮೇಲೆ ಕಲ್ಲು ತೂರಾಟ