Select Your Language

Notifications

webdunia
webdunia
webdunia
webdunia

11 ಪೊಲೀಸ್ ಸಿಬ್ಬಂದಿ ಅಮಾನತು

11 police personnel suspended
545 PSI ಹುದ್ದೆಗಳ ನೇಮಕಾತಿಯಲ್ಲಿ ನಡೆದ ಅಕ್ರಮ ಈಗಾಗಲೇ ಬಯಲಾಗಿದೆ.. ಸಿಐಡಿ ಅಧಿಕಾರಿಗಳು ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ತನಿಖೆಯಲ್ಲಿ ಒಂದಲ್ಲ ಒಂದು ಹೊಸ ವಿಚಾರಗಳು ಬೆಳಕಿಗೆ ಬರುತ್ತಿದೆ.. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಕಲಬುರಗಿ ನಗರದ ವಿವಿಧ ಠಾಣೆಗಳ 11 ಮಂದಿ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಸ್ಟೇಷನ್ ಬಜಾರ್ ಠಾಣೆಯ ಮೂವರು, ಮಹಿಳಾ ಠಾಣೆಯ 8 ಸಿಬ್ಬಂದಿ ಅಮಾನತುಗೊಂಡಿದ್ದಾರೆ.. ಅಮಾನತುಗೊಂಡಿರುವ ಎಲ್ಲಾ ಪೊಲೀಸ್ ಸಿಬ್ಬಂದಿ ಪಿಎಸ್​​ಐ ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದವರು..ಇನ್ನು, ಮಧ್ಯಾಹ್ನದ ವೇಳೆಗೆ ಅಮಾನತು ಆದೇಶ ಹೊರಬೀಳುವ ಸಾಧ್ಯತೆಯಿದೆ ಎನ್ನಲಾಗ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಾರಿಹೋದ ಮೇಲ್ಚಾವಣಿ, ಕುಸಿದ ಮನೆ ಗೋಡೆ