ತುಮಕೂರು ಜಿಲ್ಲೆಯ ಪಾವಗಡ ಸಾರ್ವಜನಿಕ ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಮಹಿಳೆಯರು ನೆಲದ ಮೇಲೆಯೇ ಮಲಗಿಸಿದ ಘಟನೆ ಬೆಳಕಿಗೆ ಬಂದಿದೆ..ಸಂತಾನಹರಣ ಶಸ್ತ್ರ ಚಿಕಿತ್ಸೆಗೊಳಪಟ್ಟವರು ಬೆಡ್ ಸಿಗದೆ ಪರದಾಟ ನಡೆಸಿದ್ದು, ಶಸ್ತ್ರ ಚಿಕಿತ್ಸೆ ಬಳಿಕ ನೆಲದ ಮೇಲೆಯೇ ಮಲಗಿ ಮಹಿಳೆಯರು ವಿಶ್ರಾಂತಿ ಪಡೆದಿದ್ದಾರೆ. ಪಾವಗಡ ತಾಲೂಕು ಸರ್ಕಾರಿ ಆಸ್ಪತ್ರೆಯ ಸಮಸ್ಯೆಗಳು ಹಲವಾರಿದ್ದು, ಜನರು ತೀವ್ರ ಸಮಸ್ಯೆ ಅನುಭವಿಸುವಂತಾಗಿದೆ. ಆಸ್ಪತ್ರೆಯಲ್ಲಿ ಸೂಕ್ತ ಔಷಧ, ಚಿಕಿತ್ಸೆ ಸಿಗದೆ ರೋಗಿಗಳು ಪರದಾಟ ನಡೆಸುತ್ತಿದ್ದಾರೆ. ವ್ಯವಸ್ಥೆಯ ಬಗ್ಗೆ ಆಸ್ಪತ್ರೆ ಸಿಬ್ಬಂದಿ, ಜನಪ್ರತಿನಿಧಿಗಳ ವಿರುದ್ಧ ರೋಗಿಗಳ ಸಂಬಂಧಿಕರು, ಸ್ಥಳೀಯ ನಿವಾಸಿಗಳು ಆಕ್ರೋಶ
ಹೊರಹಾಕಿದ್ದಾರೆ. ಇನ್ನಾದ್ರೂ ಶಾಸಕರು, ಜನಪ್ರತಿನಿಧಿಗಳು ಇತ್ತ ಗಮನಹರಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ.