Select Your Language

Notifications

webdunia
webdunia
webdunia
webdunia

ಕ್ಷುಲ್ಲಕ ಕಾರಣಕ್ಕೆ ಆಫ್ರಿಕಾ ಪ್ರಜೆಗೆ ಬಿಯರ್ ಬಾಟಲಿಯಿಂದ ಇರಿದು ಕೊಲೆ

ಕ್ಷುಲ್ಲಕ  ಕಾರಣಕ್ಕೆ ಆಫ್ರಿಕಾ ಪ್ರಜೆಗೆ ಬಿಯರ್ ಬಾಟಲಿಯಿಂದ ಇರಿದು ಕೊಲೆ
bangalore , ಸೋಮವಾರ, 13 ಡಿಸೆಂಬರ್ 2021 (20:42 IST)
ಕ್ಷುಲ್ಲಕ ಕಾರಣಕ್ಕೆ ಆಫ್ರಿಕಾ ಪ್ರಜೆಗೆ ಬಿಯರ್ ಬಾಟಲಿಯಿಂದ ಇರಿದು ಕೊಲೈಗದಿರುವ ಮೂವರನ್ನು ಬಾಣಸವಾಡಿ ಠಾಣೆ ಪೆÇಲೀಸರು ಬಂಧಿಸಿದ್ದಾರೆ. 
ಬಾಣಸವಾಡಿಯ ನಿವಾಸಿಗಳಾದ ಅರುಣ್ (25), ನೀಲಕಂಠ (24), ಪಿಲಿಪ್‍ರಾಜ್ (26) ಬಂಧಿತರು. ಮೂವರು ಆರೋಪಿಗಳು ಆಫ್ರಿಕಾ ಮೂಲದ ಕೊತ್ತನೂರು ನಿವಾಸಿ ವಿಕ್ಟರ್‍ನನ್ನು (35) ಭಾನುವಾರ ತಡರಾತ್ರಿ ಕೊಲೆಗೈದು ಪರಾರಿಯಾಗಿದ್ದರು. ಸ್ಥಳದಲ್ಲಿ ದೊರೆತ ಕೆಲವು ಸಾಕ್ಷ್ಯಧಾರಗಳಿಂದ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಪೆÇಲೀಸರು ತಿಳಿಸಿದರು. 
ಕೈಯಲ್ಲಿ ಬಿಯರ್ ಬಾಟಲಿ ಹಾಗೂ ಸಿಗರೇಟ್ ಹಿಡಿದುಕೊಂಡು ಕಮ್ಮನಹಳ್ಳಿ ರಸ್ತೆ ಬಳಿ ವಿಕ್ಟರ್ ಬರುತ್ತಿದ್ದ. ಇದೇ ರಸ್ತೆಯ ಎದುರುಗಡೆಯಿಂದ ಬರುತ್ತಿದ್ದ ಮೂವರು ಆರೋಪಿಗಳು ಕುಡಿದ ಮತ್ತಿನಲ್ಲಿ ವಿಕ್ಟರ್‍ನನ್ನು ತಡೆದು ಬಿಯರ್ ಬಾಟಲï ಹಾಗೂ ಸಿಗರೇಟ್ ಕೊಡುವಂತೆ ಕೇಳಿದ್ದಾರೆ. ಇದನ್ನು ಕೊಡಲು ವಿಕ್ಟರ್ ನಿರಾಕರಿಸಿದಾಗ ಆರೋಪಿಗಳು ಹಾಗೂ ವಿಕ್ಟರ್ ನಡುವೆ ಜಗಳ ನಡೆದಿತ್ತು. ಗಲಾಟೆ ವೇಳೆ ವಿಕ್ಟರ್ ತಾನು ಹಿಡಿದಿದ್ದ ಬಿಯರ್ ಬಾಟಲïನಿಂದ ಆರೋಪಿಗಳ ಮೇಲೆ ಹಲ್ಲೆ ನಡೆಸಿದ್ದ. ಈ ವೇಳೆ ಅದೇ ಬಿಯರ್ ಬಾಟಲïನ್ನು ಒಡೆದು ವಿಕ್ಟರ್ ಹೊಟ್ಟೆಗೆ ಚುಚ್ಚಿ ಆರೋಪಿಗಳು ಪರಾರಿಯಾಗಿದ್ದರು. ಇತ್ತ ಗಂಭೀರವಾಗಿ ಗಾಯಗೊಂಡ ವಿಕ್ಟರ್ ತೀವ್ರ ರಕ್ತಸ್ರಾವದಿಂದ ಸ್ಥಳದ¯್ಲÉೀ ಮೃತಪಟ್ಟಿದ್ದ. ಪ್ರಕರಣ ದಾಖಲಿಸಿಕೊಂಡ ಬಾಣಸವಾಡಿ ಪೆÇಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. 
ಸಿಗರೇಟ್ ವಿಚಾರಕ್ಕೆ ವಿಕ್ಟರ್‍ನನ್ನು ಬಿಯರ್ ಬಾಟಲಿಯಿಂದ ಕೊಲೆಗೈದಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಆದರೆ, ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂದರೂ, ಬೇರೆಯದೆ ಕಾರಣಕ್ಕೆ ಕೊಲೆಯಾಗಿರಬಹುದು. ಹೀಗಾಗಿ, ತನಿಖೆಯಿಂದ ನಿಖರವಾದ ಕಾರಣ ತಿಳಿದುಬರಲಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಹೇಳಿದರು. 
ಬ್ಯುಸಿನೆಸ್ ವೀಸಾದಡಿ ಬಂದಿದ್ದ ವಿಕ್ಟರ್:
ವಿಕ್ಟರ್ ಕಳೆದ 10 ವರ್ಷದಿಂದ ಕೊತ್ತನೂರಿನಲ್ಲಿ ವಾಸಿಸುತ್ತಿದ್ದು, ಮೂರು ವರ್ಷಗಳ ಹಿಂದೆ ಬೆಂಗಳೂರು ಮೂಲದ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದ. ದಂಪತಿಗೆ ಎರಡು ವಷ್ದ ಒಂದು ಮಗುವಿದೆ. ಈತ ಆಫ್ರಿಕಾದಿಂದ ಬ್ಯುಸ್‍ನೆಸ್ ವೀಸಾದಡಿ ಭಾರತಕ್ಕೆ ಬಂದು ನಗರದಲ್ಲಿ ನೆಲೆಸಿದ್ದ. ಆದರೆ, ವೀಸಾ ಅವಧಿ ಕೂಡ ಮುಕ್ತಾಯಗೊಂಡಿತ್ತು. ಆಫ್ರಿಕಾದಲ್ಲಿರುವ ವಿಕ್ಟರ್ ಸಹೋದರರು ಆತನಿಗೆ ಆರ್ಥಿಕ ನೆರವು ನೀಡುತ್ತಿದ್ದರು ಎಂದು ತಿಳಿದು ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಂತಾರಾಷ್ಟ್ರೀಯ ವೆಬ್ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಪೊಲೀಸರ ಮುಂದೆ ದೀಡಿರ್ ಹಾಜರು