Select Your Language

Notifications

webdunia
webdunia
webdunia
webdunia

ಅಂತಾರಾಷ್ಟ್ರೀಯ ವೆಬ್ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಪೊಲೀಸರ ಮುಂದೆ ದೀಡಿರ್ ಹಾಜರು

ಅಂತಾರಾಷ್ಟ್ರೀಯ ವೆಬ್ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಪೊಲೀಸರ ಮುಂದೆ ದೀಡಿರ್ ಹಾಜರು
bangalore , ಸೋಮವಾರ, 13 ಡಿಸೆಂಬರ್ 2021 (20:36 IST)
ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಿದ್ದ ಕಾರಣ ಪೆÇಲೀಸ್ ಠಾಣೆಗೆ ಹಾಜರಾಗಿ ಸಹಿ ಹಾಕಲಾಗಿರಲಿಲ್ಲ ಎಂದು ಅಂತಾರಾಷ್ಟ್ರೀಯ ವೆಬ್ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಪೆÇಲೀಸರ ಮುಂದೆ ದೀಡಿರ್ ಹಾಜರಾಗಿ ಹೇಳಿಕೆ ನೀಡಿದ್ದಾನೆ ಎಂದು ಜೀವನ ಭೀಮಾನಗರದ ಪೆÇಲೀಸರು ತಿಳಿಸಿದರು.
ಇದೀಗ ಭಾನುವಾರ ಮಧ್ಯಾಹ್ನ ಜೀವನ್ ಭೀಮಾ ನಗರ ಪೆÇಲೀಸ್ ಠಾಣೆಗೆ ಹಾಜರಾದ ಶ್ರೀಕಿ, ಹಾಜರಾತಿಗೆ ಸಹಿ ಹಾಕಿದ್ದಾನೆ. ಅಲ್ಲದೇ, ಮುಂದಿನ ದಿನಗಳಲ್ಲಿ ಸರಿಯಾದ ಸಮಯಕ್ಕೆ ಠಾಣೆಗೆ ಹಾಜರಾಗಿ ಸಹಿ ಹಾಕುವುದಾಗಿಯೂ ಹೇಳಿದ್ದಾನೆ ಎಂದರು. 
ಬಿಟ್‍ಕಾಯಿನ್ ಹಗರಣದ ಬಳಿಕ ತಲೆಮರೆಸಿಕೊಂಡಿದ್ದ ಶ್ರೀಕಿ, ನಗರದ ಹಳೇ ವಿಮಾನ ನಿಲ್ದಾಣದ ಆರ್ಕಿಡ್ ಹೋಟೆಲ್‍ನಲ್ಲಿ ನೆಲೆಸಿದ್ದ. ಈ ವೇಳೆ ಮಾದಕ ವಸ್ತು ಸೇವನೆಯ ನಶೆಯಲ್ಲಿ ಹೋಟೆಲ್ ಸಿಬ್ಬಂದಿ ಮತ್ತು ಮ್ಯಾನೇಜರ್ ಮೇಲೆ ಹಲ್ಲೆ ಮಾಡಿದ ಸಂಬಂಧ ಜೆಬಿ ನಗರ ಪೆÇಲೀಸರು ಬಂಧಿಸಿದ್ದರು. ಕೆಲವು ದಿನಗಳಬಳಿಕ ನ್ಯಾಯಾಲಯ ಷರತ್ತಬದ್ಧ ಜಾಮೀನು ನೀಡಿತ್ತು. ಹಾಗಾಗಿ, ಜೈಲಿನಿಂದ ಹೊರಬಂದ ಶ್ರೀಕಿ ಅಂದಿನಿಂದ ಭಾನುವಾರದವರೆಗೂ ಕಣ್ಮರೆಯಾಗಿದ್ದ. 
ಪ್ರತಿ ತಿಂಗಳ ನಾಲ್ಕನೇ ಶನಿವಾರ ಪೆÇಲೀಸ್ ಠಾಣೆಗೆ ಹಾಜರಾಗಿ ಸಹಿ ಹಾಕಬೇಕೆಂದು ನ್ಯಾಯಾಲಯ ಷರತ್ತು ವಿಧಿಸಿದ್ದರೂ, ಹಾಜರಾಗದೆ ನಿಯಮಗಳನ್ನು ಗಾಳಿಗೆ ತೂರಿ ಓಡಾಡಿಕೊಂಡಿದ್ದ. ಹೀಗಾಗಿ, ನ್ಯಾಯಾಲಯ ನೀಡಿದ ಜಾಮೀನು ಷರತ್ತು ಉಲ್ಲಂಘಿಸಿ ಠಾಣೆಗೆ ಹಾಜರಾಗದೆ ಪೆÇಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದನೆ ಎಂದು ಶ್ರೀಕಿ ವಿರುದ್ಧ ಜಾಮೀನು ರದ್ದು ಮಾಡುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಪೆÇಲೀಸರು ಸಿದ್ಧತೆ ನಡೆಸಿದ್ದರು. 
ಆದರೆ, ಭಾನುವಾರ ದೀಡಿರ್ ಹಾಜರಾಗಿರುವ ಶ್ರೀಕಿ ಹಾಜರಾತಿಗೆ ಸಹಿ ಹಾಕಿದ್ದು, ಮುಂದಿನ ದಿನಗಳಲ್ಲಿ ಸರಿಯಾಗಿ ಬರುವುದಾಗಿ ತಿಳಿಸಿದ್ದಾನೆ. ಅಲ್ಲದೇ, ಶ್ರೀಕಿ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸುವವರೆಗೂ ಪ್ರತಿ ತಿಂಗಳು ನಾಲ್ಕನೇ ಶನಿವಾರ ಠಾಣೆಗೆ ಹಾಜರಾಗುವಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಆತ ವಾಸವಿರುವ ವಿಳಾಸವನ್ನು ಪಡೆದುಕೊಳ್ಳಲಾಗಿದ್ದು, ಆತನ ಮೇಲೆ ನಿಗಾ ಇಡಲಾಗಿದೆ ಎಂದು ಪೆÇಲೀಸರು ತಿಳಿಸಿರು. 
 
ಜಾರಿ ನಿರ್ದೇಶನಾಲಯ ನೋಟಿಸ್‍ಗೆ ಹಾಜರಿ:
ಬಿಟ್‍ಕಾಯಿನ್ ಹಾಗೂ ವೆಬ್ ಹ್ಯಾಕ್ ಮಾಡಿರುವ ಪ್ರಕರಣ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಜಾರಿ ನಿರ್ದೇಶನಾಲಯ ವಿಚಾರಣೆಗೆ ಹಾಜರಾಗುವಂತೆ ಶ್ರೀಕಿಗೆ ನೋಟಿಸ್ ನೀಡಲಾಗಿತ್ತು. ಅದರಂತೆ ಇಡಿ ಅಧಿಕಾರಿಗಳ ವಿಚಾರಣೆಗೆ ಹಾಜರಾಗಿದ್ದ ಪರಿಣಾಮ ಪೆÇಲೀಸ್ ಠಾಣೆಗೆ ಹಾಜರಾಗಲು ಆಗಿರಲಿಲ್ಲ ಎಂದು ಶ್ರೀಕಿ ಉತ್ತರಿಸಿರುವುದಾಗಿ ತಿಳಿದುಬಂದಿದೆ. 
ಇಷ್ಟೇ ಅಲ್ಲದೇ, ಬಿಟ್‍ಕಾಯಿನ್ ಹಗರಣದಲ್ಲಿ ಭಾಗಿಯಾಗಿರುವ ಆರೋಪಿಗಳು, ಹೇಗೆ ಹ್ಯಾಕ್ ಮಾಡಲಾಗುತ್ತಿತ್ತು. ಎಲ್ಲೆಲ್ಲಿ ಹ್ಯಾಕ್ ಮಾಡಲಾಗಿದೆ. ಪ್ರಮುಖ ವೆಬ್‍ಗಳನ್ನು ಹ್ಯಾಕ್ ಮಾಡಿರುವ ಬಗ್ಗೆ?, ಬಿಟ್‍ಕಾಯಿನ್ ಪ್ರಕರಣದಲ್ಲಿ ಯಾರಿಗೆ ಎಷ್ಟು ವರ್ಗಾವಣೆ ಮಾಡಿದ್ದಾನೆ ಎಂಬುದರ ಬಗ್ಗೆ ಇಡಿ ತನಿಖೆ ಮುಂದುವರಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾರಿನಲ್ಲಿದ್ದ 10 ಲಕ್ಷ ರೂ. ಲಪಟಾಯಿಸಿರುವ ಕಳ್ಳರು