Publish Date: Mon, 13 Dec 2021 (11:05 IST)
Updated Date: Mon, 13 Dec 2021 (11:14 IST)
ಬೆಂಗಳೂರು: ಕಾರಣವಿಲ್ಲದೇ ತಮಟೆ ಬಾರಿಸಿದ್ದಕ್ಕೆ ಯುವಕನಿಗೆ ಥಳಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.
ವಿನಾಕಾರಣ ತಮಟೆ ಬಾರಿಸಿದ್ದಕ್ಕೆ ಗ್ರಾಮಪಂಚಾಯಿತಿ ಸದಸ್ಯನ ನೇತೃತ್ವದಲ್ಲಿ ಗುಂಪೊಂದು ಹಿಗ್ಗಾ ಮುಗ್ಗಾ ಥಳಿಸಿದೆ. ಇದರಿಂದಾಗಿ ಯುವಕನಿಗೆ ಗಾಯಗಳಾಗಿವೆ.
ಈ ಸಂಬಂಧ ಯುವಕ ಪೊಲೀಸರಿಗೆ ದೂರು ನೀಡಿದ್ದು, ಆರು ಮಂದಿ ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.