ನವದೆಹಲಿ: ಬಾಲ್ಯದಲ್ಲಿ ತುಂಟಾಟವಾಡುವ ಮಕ್ಕಳು ಕಿವಿ, ಮೂಗಿನೊಳಗೆ ಆಟದ ವಸ್ತು ತುರುಕಿ ಫಜೀತಿ ತಂದಿಡುವುದು ಸಾಮಾನ್ಯ. ಅಂತಹದ್ದೇ ಒಂದು ತುಂಟಾಟದ ವಿಚಾರವೊಂದನ್ನು ವಿದೇಶೀ ಮಹಿಳೆಯೊಬ್ಬರು ಟಿಕ್ ಟಾಕ್ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.
20 ವರ್ಷಗಳ ಹಿಂದೆ ಬಾಲ್ಯದಲ್ಲಿ ತುಂಟಾಟವಾಡುತ್ತಾ ಮೂಗಿನೊಳಕ್ಕೆ ಮಣಿಯೊಂದನ್ನು ಹಾಕಿದ್ದರಂತೆ. ಅದರ ಬಗ್ಗೆ ಆ ಬಳಿಕ ಮರೆತೇ ಬಿಟ್ಟಿದ್ದರಂತೆ. ಆದರೆ ಇತ್ತೀಚೆಗೆ ಸೈನಸ್ ಸಮಸ್ಯೆಯಾದಾಗ ಮಣಿ ಮೂಗಿನೊಳಕ್ಕೆ ಹಾಕಿದ್ದ ವಿಚಾರ ನೆನಪಾಗಿತ್ತಂತೆ.
ಅದನ್ನೀಗ ಅವರು ಹೊರತೆಗೆದಿದ್ದಾರೆ. ಈ ವಿಚಾರವನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಇನ್ನು, ಆಕೆಯ ಈ ವಿಡಿಯೋ ಭಾರೀ ವೈರಲ್ ಆಗಿದೆ.