Publish Date: Sat, 11 Dec 2021 (20:22 IST)
Updated Date: Sat, 11 Dec 2021 (20:26 IST)
ಮಂಗಳೂರು ನಗರದಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಖಾಸಗಿ ಬಸ್ ಸಿಬ್ಬಂದಿಯನ್ನು ವಶಕ್ಕೆ ಪಡೆದಿದ್ದಾರೆ. ಬಸ್ ನಲ್ಲಿ ಕುಳಿತಿದ್ದ ಇಬ್ಬರು ವಿದ್ಯಾರ್ಥಿಗಳ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಲಾಗಿತ್ತು. ಬಸ್ನಲ್ಲಿ ಕುಳಿತಿದ್ದ ಜೋಡಿಯನ್ನ ಪ್ರಶ್ನಿಸಿ ಯುವಕರ ತಂಡ ಹಲ್ಲೆ ನಡೆಸಿತ್ತು. ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಯುವಕ ಶಿವಮೊಗ್ಗ ಮೂಲದವನಾಗಿದ್ದು, ವಿದ್ಯಾರ್ಥಿನಿ ಉಡುಪಿ ಮೂಲದವಳು ಎಂದು ತಿಳಿದುಬಂದಿದೆ.