Select Your Language

Notifications

webdunia
webdunia
webdunia
webdunia

ಭಾರತದ ಕುರಿತು ವಿವಾದಿತ ಹೇಳಿಕೆ:ವೀರ್ ದಾಸ್ ವಿರುದ್ಧ ದೂರು ದಾಖಲು

ಭಾರತದ ಕುರಿತು ವಿವಾದಿತ ಹೇಳಿಕೆ:ವೀರ್ ದಾಸ್ ವಿರುದ್ಧ ದೂರು ದಾಖಲು
ಮುಂಬೈ , ಬುಧವಾರ, 17 ನವೆಂಬರ್ 2021 (12:07 IST)
ಕಾಮಿಡಿಯನ್ ವೀರ್ ದಾಸ್ ಕೆನಡಿ ಸೆಂಟರ್ನಲ್ಲಿ ನೀಡಿದ್ದ ‘ನಾನು ಎರಡು ರೀತಿಯ ಭಾರತದಿಂದ ಬಂದಿದ್ದೇನೆ’ ಎಂಬ ಸ್ವಗತ ತೀವ್ರ ವಿವಾದ ಸೃಷ್ಟಿಸಿದೆ.
ಆ ಸ್ವಗತದಲ್ಲಿ ವೀರ್ ದಾಸ್ ಮಾತನಾಡುತ್ತಾ, ‘‘ನಾನು ಎರಡು ರೀತಿಯ ಭಾರತದಿಂದ ಬಂದಿದ್ದೇನೆ. ಭಾರತದಲ್ಲಿ ಹಗಲು ವೇಳೆ ಸ್ತ್ರೀಯರನ್ನು ಪೂಜಿಸುತ್ತೇವೆ, ರಾತ್ರಿ ವೇಳೆ ಸ್ತ್ರೀಯರನ್ನು ಗ್ಯಾಂಗ್‌ರೇಪ್ ಮಾಡುತ್ತೇವೆ. ಭಾರತದಲ್ಲಿ ಏರ್ ಕ್ವಾಲಿಟಿ ಇಂಡೆಕ್ಸ್ 900 ಇರುತ್ತೆ, ಆದರೂ ರಾತ್ರಿ ಆಕಾಶದಲ್ಲಿ ನಕ್ಷತ್ರ ನೋಡಲು ಬಯಸುತ್ತೇವೆ. ನಾವು ಪರಸ್ಪರರನ್ನು ಆಲಂಗಿಸುತ್ತೇವೆ, ಆದರೆ ಮಾಸ್ಕ್ ಧರಿಸಲ್ಲ’’ ಎಂದು ಹೇಳಿದ್ದರು. ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ‘ಭಾರತ, ಹಿಂದುತ್ವವನ್ನು ವೀರ್ ದಾಸ್ ಅಪಮಾನ ಮಾಡಿದ್ದಾರೆ. ಆದ್ದರಿಂದ ಅವರು ಕ್ಮೆ ಕೇಳಬೇಕು’ ಎಂದು ಸಾಮಾಜಿಕ ಜಾಲತಾಣದಲ್ಲಿ ಆಗ್ರಹ ಕೇಳಿಬಂದಿದೆ. ಈ ಹೇಳಿಕೆಯ ಕುರಿತಂತೆ ವೀರ್ ದಾಸ್ ಪ್ರತಿಕ್ರಿಯಿಸಿ, ಸ್ಪಷ್ಟನೆ ನೀಡಿದ್ದಾರೆ.
ವೀರ್ ದಾಸ್ ಹೇಳಿಕೆಯ ವಿರುದ್ಧ ಮುಂಬೈನಲ್ಲಿ ದೂರು ದಾಖಲಾಗಿದೆ. ಮಹಾರಾಷ್ಟ್ರದ ಪಾಲಘಾರ್ ಜಿಲ್ಲೆ ಬಿಜೆಪಿಯ ಕಾನೂನು ಸಲಹೆಗಾರ ಹಾಗೂ ಮುಂಬೈ ಹೈಕೋರ್ಟ್ ವಕೀಲ ಆಶುತೋಷ್ ದುಬೆ ದೂರು ನೀಡಿದ್ದಾರೆ. ವೀರ್ ಮಂಗಳವಾರ, ತಮ್ಮ ಹೇಳಿಕೆಯ ಕುರಿತು ಸ್ಪಷ್ಟನೆ ನೀಡಿದ್ದು, ತಮ್ಮ ಉದ್ದೇಶ ದೇಶವನ್ನು ಅಪಮಾನಿಸುವುದು ಆಗಿರಲಿಲ್ಲ ಎಂದಿದ್ದಾರೆ. ಸದ್ಯ ಅಮೇರಿಕಾದಲ್ಲಿರುವ ಅವರು, ವಾಷಿಂಗ್ಟನ್ ಡಿಸಿಯ ಜಾನ್ ಎಫ್ ಕೆನಡಿ ಸೆಂಟರ್ನಲ್ಲಿ ಮಾತನಾಡುವಾಗ ಹೇಳಿದ ಸ್ವಗತ ವಿವಾದ ಸೃಷ್ಟಿಸಿತ್ತು.


Share this Story:

Follow Webdunia kannada

ಮುಂದಿನ ಸುದ್ದಿ

ಜೈ ಭೀಮ್ ವಿವಾದ: ನಟ ಸೂರ್ಯ ಮನೆಗೆ ಭದ್ರತೆ