Select Your Language

Notifications

webdunia
webdunia
webdunia
webdunia

ರಾಜ್ಯದ ಕರಾವಳಿ ಸೇರಿದಂತೆ ದಕ್ಷಿಣ ಭಾರತದಲ್ಲಿ ನವೆಂಬರ್‌ 18 ವರೆಗೆ ‘ಭಾರಿ ಮಳೆ’ ಎಚ್ಚರಿಕೆ

ರಾಜ್ಯದ ಕರಾವಳಿ ಸೇರಿದಂತೆ ದಕ್ಷಿಣ ಭಾರತದಲ್ಲಿ ನವೆಂಬರ್‌ 18 ವರೆಗೆ ‘ಭಾರಿ ಮಳೆ’ ಎಚ್ಚರಿಕೆ
bangalore , ಮಂಗಳವಾರ, 16 ನವೆಂಬರ್ 2021 (21:57 IST)
ಕೇರಳ, ಕರ್ನಾಟಕದ ಕೆಲವು ಭಾಗಗಳು, ಅಂಡಮಾನ್ ನಿಕೋಬಾರ್ ದ್ವೀಪಗಳು, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಕರಾವಳಿ ನವೆಂಬರ್ 18 ರವರೆಗೆ ಭಾರೀ ಮಳೆಗೆ ಸಾಕ್ಷಿಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಭಾನುವಾರ ಎಚ್ಚರಿಸಿದೆ.
ನವೆಂಬರ್ 17 ರ ಸುಮಾರಿಗೆ ದಕ್ಷಿಣ ಮಹಾರಾಷ್ಟ್ರ-ಗೋವಾ ಕರಾವಳಿಯ ಅರೇಬಿಯನ್ ಸಮುದ್ರದ ಮೇಲೆ ಹೊಸತಾಗಿ ವಾಯುಭಾರ ಕುಸಿತ ರೂಪುಗೊಳ್ಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ಇತ್ತೀಚಿನ ಬುಲೆಟಿನ್ ಹೇಳಿದೆ.
ಕೇರಳ, ದಕ್ಷಿಣ ಕರಾವಳಿ ಕರ್ನಾಟಕ ಮತ್ತು ಅಂಡಮಾನ್ ನಿಕೋಬಾರ್ ದ್ವೀಪಗಳು ಮತ್ತು ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳಲ್ಲಿ ನವೆಂಬರ್ 15 ರಿಂದ 18 ರವರೆಗೆ ‘ಧಾರಾಕಾರ ಮಳೆ’ ಬೀಳುವ ಸಾಧ್ಯತೆಯಿದೆ.
ಮಳೆ ಎಚ್ಚರಿಕೆಯ ಹಿನ್ನಲೆಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾನುವಾರ ತಿರುವನಂತಪುರದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ರಾಜ್ಯದ ಪತ್ತನಂತಿಟ್ಟ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಭಾರೀ ಮಳೆಯ ಎಚ್ಚರಿಕೆಯನ್ನು ನೀಡಲಾಗಿದೆ.
ಎರ್ನಾಕುಲಂ, ಇಡುಕ್ಕಿ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕಾಕಿ ಮತ್ತು ಇಡುಕ್ಕಿ ಅಣೆಕಟ್ಟುಗಳನ್ನು ತೆರೆಯಲಾಗಿದ್ದು, ವಿದ್ಯುತ್ ಮತ್ತು ಜಲ ಇಲಾಖೆಯಿಂದ ನಿರ್ವಹಿಸಲ್ಪಡುವ ವಿವಿಧ ಅಣೆಕಟ್ಟುಗಳಲ್ಲಿ ನಿಗಾವನ್ನು ತೀವ್ರಗೊಳಿಸಲಾಗಿದೆ.
ಕೇರಳದಲ್ಲಿ ಪ್ರಸ್ತುತ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಮೂರು ತಂಡಗಳಿದ್ದು, ನಾಲ್ಕನೇ ತಂಡ ನಾಳೆ ಬೆಳಗ್ಗೆ ಕೇರಳ ತಲುಪಲಿದೆ. ಅಗತ್ಯ ಬಿದ್ದರೆ ಕಣ್ಣೂರು ಮತ್ತು ವಯನಾಡು ಜಿಲ್ಲೆಗಳಿಗೆ ತೆರಳಲು ರಕ್ಷಣಾ ಸುರಕ್ಷಾ ದಳದ ಎರಡು ತಂಡಗಳು ಸಿದ್ಧವಾಗಿವೆ.
ಈ ಮಧ್ಯೆ, ತಮಿಳುನಾಡು,ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಕರಾವಳಿ ಹಾಗೂ ಕೇರಳದಲ್ಲಿ ನವೆಂಬರ್ 15 ರಿಂದ 17 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ನವೆಂಬರ್ 15-16 ರಂದು ಗೋವಾದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಅಲ್ಲದೆ, ನವೆಂಬರ್ 16 ಮತ್ತು 17 ರಂದು ಒಡಿಶಾದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ.
ನವೆಂಬರ್ 14 ಮತ್ತು 15 ರಂದು ಅಂಡಮಾನ್ ಸಮುದ್ರ ಮತ್ತು ಪಕ್ಕದ ಆಗ್ನೇಯ ಬಂಗಾಳ ಕೊಲ್ಲಿ, ನವೆಂಬರ್ 16-18 ರ ಅವಧಿಯಲ್ಲಿ ಪಶ್ಚಿಮ-ಮಧ್ಯ ಮತ್ತು ಪಕ್ಕದ ಪೂರ್ವ-ಮಧ್ಯ ಬಂಗಾಳ ಕೊಲ್ಲಿ, ನವೆಂಬರ್ 17 ಮತ್ತು 18 ರಂದು ಆಂಧ್ರ ಪ್ರದೇಶ ಮತ್ತು ದಕ್ಷಿಣ ಒಡಿಶಾ ಮತ್ತು ಉತ್ತರ ತಮಿಳುನಾಡು ಕರಾವಳಿಯಲ್ಲಿ ಮೀನುಗಾರಿಕೆಗೆ ತೆರಳದಂತೆ ಹವಾಮಾನ ಇಲಾಖೆ ಮೀನುಗಾರಿಕೆಗೆ ತೆರಳದಂತೆ ಸೂಚಿಸಿದೆ.
ಜೊತೆಗೆ, ಬಂಗಾಳ ಕೊಲ್ಲಿ ಮತ್ತು ಅಂಡಮಾನ್ ಸಮುದ್ರಗಳಲ್ಲಿ ಮೀನುಗಾರಿಕೆಗೆ ತರಳಿರುವ ಮೀನುಗಾರರಿಗೆ ನವೆಂಬರ್ 15 ರೊಳಗೆ ಕರಾವಳಿಗೆ ಮರಳಲು ಇಲಾಖೆ ಸೂಚಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾರ್ವಜನಿಕ ಶೌಚಾಲಯದಲ್ಲಿ ನೀರಿನ ವ್ಯವಸ್ಥೆ ಮಾಡುವಂತೆ ಕರವೇ ಆಗ್ರಹ