Select Your Language

Notifications

webdunia
webdunia
webdunia
webdunia

ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ರಾಜ್ಯದಲ್ಲಿ ಭಾರಿ ಮಳೆ: ಹೈ ಅಲರ್ಟ್ ಘೋಷಣೆ

ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ರಾಜ್ಯದಲ್ಲಿ ಭಾರಿ ಮಳೆ:  ಹೈ ಅಲರ್ಟ್ ಘೋಷಣೆ
bangalore , ಸೋಮವಾರ, 6 ಸೆಪ್ಟಂಬರ್ 2021 (20:29 IST)
ಬೆಂಗಳೂರು: ದಕ್ಷಿಣ ಒಡಿಶಾ ಮತ್ತು ಉತ್ತರ ಆಂದ್ರಪ್ರದೇಶದ ವಾಯುವ್ಯ ಭಾಗದಲ್ಲಿನ  ಪಶ್ಚಿಮ ಬಂಗಾಲ ಕೊಲ್ಲಿಯಲ್ಲಿ   ವಾಯುಭಾರ ಕುಸಿತವಾಗಿದೆ. 7.6  ಕಿ. ಮೀ ಎತ್ತರದಲ್ಲಿ ಸುಳಿಗಾಳಿ ಇದ್ದು,  ಎರಡು ಮೂರು ದಿನಗಳಲ್ಲಿ ಪಶ್ಚಿಮ ಹಾಗು ವಾಯುವ್ಯ  ದಿಕ್ಕಿಗೆ ಚಲಿಸುವುದನ್ನು ನಿರೀಕ್ಷಿಸಲಾಗಿದೆ. ಈ ಹಿನ್ನಲೆಯಲ್ಲಿ  ಕರ್ನಾಟಕದಲ್ಲಿ ಸೋಮವಾರವೂ ಸಹ ಭಾರಿ ಅಥವಾ  ಅತಿ ಭಾರಿ ಮಳೆಯ ಮುನ್ಸೂಚನೆ ಇದೆ ಎಂದು ಹಲವಮನ ಇಲಾಖೆ ತಿಳಿಸಿದೆ. 
 
ಕರಾವಳಿಯಲ್ಲಿ ಸೆಪ್ಟೆಂಬರ್ 6  ಮತ್ತು 7 ರಂದು ಅತಿ ಭಾರಿ ಮಳೆ ಬೀಳುವ ನಿರೀಕ್ಷೆಯಿಂದ ಅರೇಂಜ್ ಅಲರ್ಟ್ ನೀಡಲಾಗಿದೆ. 8  ಮತ್ತು 9 ರಂದು ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡಿನ ಕಲ್ಬುರ್ಗಿ, ಕೊಪ್ಪಳ, ವಿಜಯಪುರ, ಯಾದಗಿರಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ  ಇಂದು ಮತ್ತು ನಾಳೆ  ಕೆಲವು ಕಡೆ ಅತಿ ಭಾರಿ ಮಳೆಯಾಗಲಿದ್ದು,  ಅರೇಂಜ್ ಅಲರ್ಟ್ ನೀಡಲಾಗಿದೆ ಎಂದು ಹೇಳಿದೆ 
 
ಬೆಳಗಾವಿ, ಬೀದರ್, ಹಾವೇರಿ, ಗದಗ್, ಹಾವೇರಿ ಬೀದರ್, ರಾಯಚೂರು ಜಿಲ್ಲೆಗಳಲ್ಲಿ 6  ಮತ್ತು 7 ರಂದು  ಯೆಲ್ಲೋ ಅಲರ್ಟ್ ನೀಡಲಾಗಿದೆ. ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ  ಇಂದು ಭಾರಿ ಅಲೆಯಾಗುವ ಸೂಚನೆ ಇರುವುದರಿಂದ ಯೆಲ್ಲೋ ಅಲರ್ಟ್ ಕೊಡಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ. 
 
ಸೋಮವಾರದ  ಪ್ರಮುಖಾಂಶ::  
ಮುಂಗಾರು ರಾಜ್ಯದೆಲ್ಲೆಡೆ ಚುರುಕಾಗಿದ್ದು, ಕರಾವಳಿ ಹಾಗು ಉತ್ತರ ಒಳನಾಡಿನ ಬಹುತೇಕ ಎಲ್ಲಾ ಕಡೆ ಮಳೆಯಾಗಿದೆ, ದಕ್ಷಿಣ ಒಳನಾಡಿನ ಹಲವು ಕಡೆ ಮಳೆಯಾಗಿದೆ ಮುಖ್ಯವಾಗಿ ಕಂಪ್ಲಿಯಲ್ಲಿ  9 ಸೆ.ಮೀ , ಮುಲ್ಕಿ 8 ಸೆ.ಮೀ, ಕದ್ರಾ, ಕುಕನೂರು, ಸಂತೆಹಳ್ಳಿಯಲ್ಲಿ ತಲಾ 7 ಸೆ.ಮೀ ಮಳೆಯಾಗಿದೆ ಎಂದು ಇಲಾಖೆ ತಿಳಿಸಿದೆ.  
 
ಮುಂದಿನ ದಿನಗಳಲ್ಲಿ ಮಳೆ: 
ರಾಜ್ಯದ ಮುಂದಿನ 24 ಗಂಟೆಯಲ್ಲಿ ಬಹುತೇಕ ಕಡೆ ಮಳೆ ನೀರಿಕ್ಷಿಸಲಾಗಿದೆ.  ಮುಂದಿನ 48 ಗಂಟೆಗಳಲ್ಲಿ ಕರಾವಳಿ,  ಉತ್ತರ ಒಳನಾಡಿನಲ್ಲಿ, ದಕ್ಷಿಣ ಒಳನಾಡಿನಲ್ಲಿ  ಗುಡುಗು ಸಹಿತ ಮಳೆಯಾಗುವ ಹೆಚ್ಚಿನ ನಿರೀಕ್ಷೆ  ಇದೆ ಎಂದಿದೆ.
 
ಮೀನುಗಾರರಿಗೆ ಮುನ್ನೆಚ್ಚರಿಕೆ:
ಕರಾವಳಿಯುದ್ದಕ್ಕೂ ಮತ್ತು  ಕರಾವಳಿಯನ್ನು  ಭೇದಿಸಿ ಗಾಳಿ 40  ರಿಂದ 50 ಕಿ.ಮೀ  ಪಾರ್ಟಿ ಗಂಟೆಗೆ ಬೀಸುವ ನಿರೀಕ್ಷೆ ಇದೆ, ಹಾಗಾಗಿ ಈ ಪ್ರದೇಶಗಲ್ಲಿ ಸಮುದ್ರಕ್ಕೆ ಇಳಿಯಬಾರದು ಎಂದು ಎನ್ನುವ ಮುನ್ಸೂಚನೆಯನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದೆ.
 
ರಾಜಧಾನಿಯಲ್ಲಿ ಮಳೆ: 
ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣವಿದ್ದು, ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆ  ಇದೆ, ಗರಿಷ್ಟ 28  ಡಿಗ್ರಿ ಕನಿಷ್ಠ 20 ಡಿಗ್ರಿ ಉಷ್ಣಾಂಶ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.  

Share this Story:

Follow Webdunia kannada

ಮುಂದಿನ ಸುದ್ದಿ

ರಸ್ತೆ ಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚಲು ಸೂಚನೆ