Select Your Language

Notifications

webdunia
webdunia
webdunia
webdunia

ರಸ್ತೆ ಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚಲು ಸೂಚನೆ

ರಸ್ತೆ ಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚಲು ಸೂಚನೆ
bangalore , ಸೋಮವಾರ, 6 ಸೆಪ್ಟಂಬರ್ 2021 (20:23 IST)
ಬಿಬಿಎಂಪಿ  ವ್ಯಾಪ್ತಿಯಲ್ಲಿ ಕಳೆದ ಮರ‍್ನಾಲ್ಕು ತಿಂಗಳಿಂದ ಮಳೆ ಬೀಳುತ್ತಿರುವುದರಿಂದ ಹಲವಾರು ರಸ್ತೆಗಳು ಹಾಳಾಗಿ ಗುಂಡಿಗಳು ಬಿದ್ದಿರುತ್ತವೆ. ಈ ಸಂಬಂಧ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚಲು ಕೂಡಲೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವರಾದ ಶ್ರೀ ಆರ್.ಅಶೋಕ್ ರವರು ತಿಳಿಸಿದರು.
 
ನಗರದಲ್ಲಿ ಮಳೆಯಿಂದಾಗುವ ಅನಾಹುತಗಳನ್ನು ತಪ್ಪಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಸಂಬಂಧ ನಡೆಸಿದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಪ್ರಮುಖ ರಸ್ತೆಗಳಾದ 1,332 ಕಿ.ಮೀ ವ್ಯಾಪ್ತಿಯಲ್ಲಿ ಬಿದ್ದಿರುವ ರಸ್ತೆ ಗುಂಡಿಗಳು ಹಾಗೂ ವಾರ್ಡ್ ಮಟ್ಟದಲ್ಲಿ ಬರುವ 85,791 ಕಿ.ಮೀ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚಲು ತಿಳಿಸಲಾಗಿದ್ದು, ಪ್ರಮುಖ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಸೆಪ್ಟೆಂಬರ್ 20ರೊಳಗೆ ಮುಚ್ಚಲು ಹಾಗೂ ವಾರ್ಡ್ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಸೆಪ್ಟೆಂಬರ್ 30 ರೊಳಗಾಗಿ ಮುಚ್ಚಲು ಸೂಚನೆ ನೀಡಲಾಗಿದೆ. ಮಳೆ ಜಾಸ್ತಿಯಾದರೆ ಮತ್ತೆ ರಸ್ತೆ ಗುಂಡಿಗಳು ಬೀಳಲಿವೆ ಅವುಗಳನ್ನು ನಿರಂತರವಾಗಿ ಮುಚ್ಚಲು ಕ್ರಮವಹಿಸಬೇಕು. ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ನಿರಂತರವಾಗಿ ನಡೆಯುವ ಕೆಲಸವಾಗಿದೆ. ಜಲಮಂಡಳಿ, ಬೆಸ್ಕಾಂ ವತಿಯಿಂದ ರಸ್ತೆಗಳಲ್ಲಿ ಹಗೆಯುತ್ತಿರುವುದರಿಂದ ಸಮಸ್ಯೆಯಾಗುತ್ತಿದ್ದು, ಪಾಲಿಕೆ, ಜಲಮಂಡಳಿ ಹಾಗೂ ಬೆಸ್ಕಾಂ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಸಮನ್ವಯ ಸಭೆ ನಡೆಸಿ ರಸ್ತೆ ದುರಸ್ತಿ ಕಾರ್ಯ ಮಾಡಲಾಗುವುದು. ಈ ಪೈಕಿ ಸ್ಥಳ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ  ಎಂದರು.
 
ಹಾಟ್ ಮಿಕ್ಸ್ ಪ್ಲಾಂಟ್ ನಿಂದ ಪ್ರತಿನಿತ್ಯ 20 ಲೋಡ್ ಡಾಂಬರು 8 ವಲಯಗಳಿಗೆ ಹೋಗಲಿದ್ದು, ರಸ್ತೆಗುಂಡಿಗಳನ್ನು ಮುಚ್ಚಲಾಗುತ್ತದೆ. ರಸ್ತೆ ಗುಂಡಿ ಮುಚ್ಚುವ ಸ್ಥಳದಲ್ಲಿ ಇಂಜಿನಿಯರ್‌ಗಳು ಕಡ್ಡಾಯವಾಗಿ ಇರಬೇಕು. ಗುಂಡಿ ಸುತ್ತಲು ಸ್ವಚ್ಛ ಮಾಡಿ ಗುಣಮಟ್ಟವಾಗಿ ಗುಂಡಿಗಳನ್ನು ಮುಚ್ಚಬೇಕು. ಪ್ರತಿ ಗುಂಡಿಗೂ ಜಿಯೋ ಟ್ಯಾಗಿಂಗ್ ಮಾಡಲಾಗಿದ್ದು, ಎಲ್ಲಿ ಗುಂಡಿ ಮುಚ್ಚಲಾಗಿದೆ ಹಾಗೂ ಅದರ ಭಾವಚಿತ್ರ ಪಾಲಿಕೆಯ ವೆಬ್‌ಸೈಟ್ ನಲ್ಲಿ ಲಭ್ಯವಿರಲಿದೆ ಎಂದು ತಿಳಿಸಿದರು.
 
ಗಣೇಶೋತ್ಸವ ಆಚರಣೆ:
 
ಬಿಬಿಎಂಪಿ ವ್ಯಾಪ್ತಿಯಲ್ಲಿ ಗಣೇಶೋತ್ವರ ಆಚರಿಸುವ ಸಂಬಂಧ ಪಾಲಿಕೆ ಆಯ್ದ ಕೆರೆಗಳ ಅಂಗಳದಲ್ಲಿರುವ ಕಲ್ಯಾಣಿ/ನಿರ್ಮಿಸುವ ಹೊಂಡಗಗಳಲ್ಲಿ ಬೆಳಗ್ಗೆಯಿಂದ ರಾತ್ರಿ 9 ರವರೆಗೆ ವಿಸರ್ಜನೆ ಮಾಡಲು ಅನುಮತಿ ನೀಡಲಾಗುವುದು. ಅದರಂತೆ ಸಾರ್ವಜನಿಕ ಸ್ಥಳಗಳಳಲ್ಲಿ ಪ್ರತಿಷ್ಠಾಪಿಸಿರುವ 4 ಅಡಿ ಗಣೇಶ ಮೂರ್ತಿಗಳಿಗೆ ಮಾತ್ರ ಕಲ್ಯಾಣಿ/ಹೊಂಡಗಳಲ್ಲಿ ವಿಸರ್ಜನೆ ಮಾಡಲು ಅನುಮತಿ ನೀಡಲಾಗುವುದು. ಯಾವುದೇ ಸಮಸ್ಯೆ ಆಗದಂತೆ ಕಲ್ಯಾಣಿ/ಹೊಂಡಗಳ ಬಳಿ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗುತ್ತದೆ. ಗಣೇಶ ವಿಸರ್ಜನೆ ಮಾಡಲು ಸಂಘ-ಸಂಸ್ಥೆಗಳು/ಸಾರ್ವಜನಿಕರಿಗೆ ನೇರವಾಗಿ ಅನುಮತಿ ನೀಡುವುದಿಲ್ಲ. ಪಾಲಿಕೆ ವತಿಯಿಂದ ಈಜುಗಾರರನ್ನು ನಿಯೋಜನೆ ಮಾಡಲಾಗಿರುತ್ತದೆ. ವಿಸರ್ಜನೆ ಮಾಡಲು ತಂದ ಗಣೇಶ ಮೂರ್ತಿಗಳನ್ನು ಬ್ಯಾರಿಕೇಡ್ ಬಳಿ ಇಡಲು ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ಈಜುಗಾರರು ಗಣೇಶ ಮೂರ್ತಿಗಳನ್ನು ಕಲ್ಯಾಣಿ/ಹೊಂಡಗಳಲ್ಲಿ ವಿಸರ್ಜನೆ ಮಾಡಲಿದ್ದಾರೆ. ಇದನ್ನು ನಿರ್ವಹಣೆ ಮಾಡಲು ಎಲ್ಲಾ ಕಡೆ ಪೊಲೀಸ್ ಅಧಿಕಾರಿಗಳು ಹಾಗೂ ಪಾಲಿಕೆ ಅಭಿಯಂತರರು ಉಪಸ್ಥಿತರಿರಲಿದ್ದಾರೆ. ಗಣೇಶ ಮೂರ್ತಿ ವಿಸರ್ಜನಾ ಸ್ಥಳದಲ್ಲಿ ಯಾವುದೇ ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡದೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು. ಹಾಗೂ ಮನೆಗಳಲ್ಲಿಡುವ ಗಣೇಶ ಮೂರ್ತಿಗಳನ್ನು ಆಯಾ ವಾರ್ಡ್ ಮೊಬೈಲ್ ಟ್ಯಾಂನ್ ನಲ್ಲೇ ವಿಸರ್ಜಿಸಲು ಅವಕಾಶ ಕಲ್ಪಿಸಲಾಗಿದ್ದು, ಅಲ್ಲೇ ವಿಸರ್ಜನೆ ಮಾಡಲು ಸಾರ್ವಜನಿಕರಲ್ಲಿ ಕೋರಿದರು.
 
ಸಾರ್ವಜನಿಕರು ಒಂದು ಸಮಯಕ್ಕೆ 20 ಜನ ಮಾತ್ರ ಪೂಜೆ ಮಾಡುವ ಸ್ಥಳದಲ್ಲಿರುವಂತೆ ನೋಡಿಕೊಳ್ಳುವ ವ್ಯವಸ್ಥೆ ಮಾಡಬೇಕು. ಅದಕ್ಕೆ ಎಲ್ಲಾ ಗಣೇಶ ಮಂಡಳಿಗಳು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು. ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವವರಿಗಾಗಿ ಪ್ರತಿ ವಾರ್ಡ್ ಗೂ ಮೊಬೈಲ್ ಟ್ಯಾಂಕ್ ಗಳ ವ್ಯವಸ್ಥೆ ಮಾಡಲಾಗುವುದು. ಮೊಬೈಲ್ ಟ್ಯಾಂಕ್ ನಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಿ ವಾರ್ಡ್ ರಸ್ತೆಗಳಲ್ಲಿ ಗಣೇಶ ವಿಸರ್ಜನೆ ಮಾಡುವ ಬಗ್ಗೆ ಮಾಹಿತಿ ನೀಡಲಿದ್ದಾರೆ. ಗಣೇಶ ಪ್ರತಿಷ್ಠಾಪನೆಗೆ 5 ದಿನಗಳ ಕಾಲಾವಕಾಶವಿರಲಿದ್ದು, 5 ದಿನಗಳ ನಂತರ ಗಣೇಶ ಪ್ರತಿಷ್ಠಾಪಿಸಲು ಅನುಮತಿ ನೀಡುವುದಿಲ್ಲ ಎಂದರು. 
 
ಮನೆ-ಮನೆ ಆರೋಗ್ಯ ಸಮೀಕ್ಷೆ:
 
ಪಾಲಿಕೆ ವೈದ್ಯರು ನಿಮ್ಮ ಮನೆ ಬಾಗಿಲಿಗೆ ಎಂಬ ಯೋಜನೆಯಡಿ ನಗರದಲ್ಲಿ ಮನೆ-ಮನೆ ತೆರಳಿ ಆರೋಗ್ಯ ಸಮೀಕ್ಷೆ ನಡೆಸಲಾಗುತ್ತಿದ್ದು, ಕಳೆದ 21 ದಿನಗಳಲ್ಲಿ 2,48,280 ಮನೆಗೆ ಭೇಟಿ ನಿಡಿ 7,11,648 ಮಂದಿಗೆ ಆರೋಗ್ಯ ಪರೀಕ್ಷೆ ಮಾಡಲಾಗಿದೆ. ಅದರಲ್ಲಿ 22,362 ಮಂದಿಗೆ ಕೋವಿಡ್ ದೃಢಪಟ್ಟವರು, 4,39,777 ಮಂದಿ ಮೊದಲನೇ ಡೋಸ್ ಪಡೆದವರು, 1,67,081 ಮಂದಿ ಎರಡನೇ ಡೋಸ್ ಲಸಿಕೆ ಪಡೆದವರಿದವರು, ಸಮೀಕ್ಷೆ ಮಾಡಿದವರಲ್ಲಿ 57,528 ಮಂದಿಗೆ ಕೋಮಾರ್ಬಿಡಿಟ್ ಖಾಯಿಲೆಗಳಿರುವವರಿದ್ದು, ಶೇ. 50.8 ರಷ್ಟು ಮಂದಿಗೆ ಡಯಾಬಿಟಿಸ್, ಶೇ. 35.82 ರಷ್ಟು ಮಂದಿಗೆ ರಕ್ತದೊತ್ತಡ, 2.48 ರಷ್ಟು ಮಂದಿಗೆ ಹೃದಯ ಸಂಬಂಧಿ ಖಾಯಿಲೆ, 2.99 ರಷ್ಟು ಮಂದಿಗೆ ಥೈರಾಯ್ಡ್ ಖಾಯಿಲೆಯಿರುವುದು ನಿಗದಿಯಾಗಿದೆ. ಮನೆ-ಮನೆ ಆರೋಗ್ಯ ಸಮೀಕ್ಷೆಯನ್ನು ಶೇ. 90 ರಷ್ಟು ಗುರಿ ಸಾಧಿಸಿದ್ದು,  ನಿಗದಿತ ಸಮಯದಲ್ಲಿ ಮನೆ-ಮನೆ ಆರೋಗ್ಯ ಸಮೀಕ್ಷೆ ನಡೆಸಲಾಗುವುದು ಎಂದರು. 
 
ಸಭೆಯಲ್ಲಿ ಮುಖ್ಯ ಆಯುಕ್ತರು ಶ್ರೀ ಗೌರವ್ ಗುಪ್ತ, ವಿಶೇಷ ಆಯುಕ್ತರುಗಳಾದ ಮನೋಜ್ ಜೈನ್, ರಂದೀಪ್, ರೆಡ್ಡಿ ಶಂಕರಬಾಬು, ದಯಾನಂದ್, ಬಸವರಾಜ್, ತುಳಸಿ ಮದ್ದಿನೇನಿ, ಡಾ. ಹರೀಶ್ ಕುಮಾರ್, ರವೀಂದ್ರ, ಎಲ್ಲಾ ವಲಯ ಜಂಟಿ ಆಯುಕ್ತರುಗಳು, ಮುಖ್ಯ ಇಂಜಿನಿಯರ್‌ಗಳು ಹಾಗೂ ಇನ್ನಿತರೆ ಅಧಿಕಾತರಿಗಳು ಉಪಸ್ಥಿತರಿದ್ದರು.
bbmp

Share this Story:

Follow Webdunia kannada

ಮುಂದಿನ ಸುದ್ದಿ

ಒಡಿಶಾ ಮತ್ತು ಉತ್ತರ ವಾಯುಬ್ವ್ಯ ಹಾಗು ಪಶ್ಚಿಮ ಬಂಗಾಲ ಕೊಳ್ಳಿಯಲ್ಲಿ ವಾಯುಭಾರ ಕುಸಿತ