Select Your Language

Notifications

webdunia
webdunia
webdunia
Thursday, 10 April 2025
webdunia

ಬೆಂಗಳೂರಿನಲ್ಲಿ ರಸ್ತೆಗಳ ಗುಂಡಿ ಮುಚ್ಚುವ ಕಾಮಗಾರಿ ಶುರು

bengaluru
bengaluru , ಭಾನುವಾರ, 5 ಸೆಪ್ಟಂಬರ್ 2021 (17:40 IST)
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಆರ್ಟರಿಯಲ್, ಸಬ್ - ಆರ್ಟರಿಯಲ್ ರಸ್ತೆಗಳು, ಹೈ-ಡೆನ್ಸಿಟಿ ಕಾರಿಡಾರ್ ರಸ್ತೆಗಳು ಸೇರಿದಂತೆ ಎಲ್ಲಾ ವಾರ್ಡ್ ರಸ್ತೆಗಳಲ್ಲಿನ ರಸ್ತೆಗುಂಡಿಗಳನ್ನು‌ ಮುಚ್ಚುವ ಕಾಮಗಾರಿ‌ ಆರಂಭವಾಗಿದೆ.
ಆಯಾ ವಲಯದ ಮುಖ್ಯ ಇಂಜಿನಿರ್ ಗಳು, ವಿಭಾಗದ ಕಾರ್ಯಪಾಲಕ ಇಂಜಿನಿಯರ್ಗಳು, ಸಹಾಯಕ ಕಾರ್ಯಪಾಲಕ ಅಭಿಯಂತರರು, ವಾರ್ಡ್ ಇಂಜಿನಿಯರ್ ಗಳು ರಸ್ತೆಗುಂಡಿಗಳನ್ನು ಮುಚ್ವುವ ಕೆಲಸ ಮಾಡುತ್ತಿದ್ದಾರೆ.
ಕಳೆದ ರಾತ್ರಿ ಪಶ್ಚಿಮ ವಲಯ ಹೊರತುಪಡಿಸಿ ಉಳಿದ 7 ವಲಯಗಳಲ್ಲಿ ರಸ್ತೆ ಗುಂಡಿಗಳನ್ನು
ಮುಚ್ಚಲಾಗುತ್ತಿದೆ. ಈ ಪೈಕಿ ದಕ್ಷಿಣ ವಲಯದಲ್ಲಿ ಬನ್ನೇರುಘಟ್ಟ ರಸ್ತೆ, ಪೂರ್ವ ವಲಯದಲ್ಲಿ ನೇತಾಜಿ ರಸ್ತೆ, ಆರ್.ಆರ್.ನಗರ ವಲಯದಲ್ಲಿ ತುಮಕೂರು ರಸ್ತೆ, ಮಹದೇವಪುರ ವಲಯದಲ್ಲಿ ಕೊಡಿಗೇಹಳ್ಳಿ, ಬೊಮ್ಮನಹಳ್ಳಿ ವಲಯದಲ್ಲಿ ಕೊತ್ತನೂರು ರಸ್ತೆ, ದಾಸರಹಳ್ಳಿ ವಲಯದಲ್ಲಿ ಹೆಗ್ಗನಹಳ್ಳಿ ರಸ್ತೆ, ಯಲಹಂಕ ವಲಯದಲ್ಲಿ ವಿದ್ಯಾರಣ್ಯಪುರ ಮುಖ್ಯ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಕೊರೊನಾ ಜಿಗಿತ: 1117 ಸೋಂಕು ದೃಢ