Select Your Language

Notifications

webdunia
webdunia
webdunia
webdunia

ಮಹಿಳಾ ಟೆಕ್ಕಿಗೆ ಮದ್ಯ ಕುಡಿಸಿ ಅತ್ಯಾಚಾರ: ಇಬ್ಬರು ನೈಜಿರಿಯನ್ನರ ಬಂಧನ

ಮಹಿಳಾ ಟೆಕ್ಕಿಗೆ ಮದ್ಯ ಕುಡಿಸಿ ಅತ್ಯಾಚಾರ: ಇಬ್ಬರು ನೈಜಿರಿಯನ್ನರ ಬಂಧನ
bengaluru , ಶನಿವಾರ, 4 ಸೆಪ್ಟಂಬರ್ 2021 (14:07 IST)

ಪರಿಚಯ ಮಾಡಿಕೊಳ್ಳದ ಸಿಟ್ಟಿಗೆ ಮಹಿಳಾ ಟೆಕ್ಕಿಗೆ ಮದ್ಯ ಕುಡಿಸಿ ಅತ್ಯಾಚಾರ ಎಸಗಿದ ಆರೋಪದಲ್ಲಿ ನೈಜೀರಿಯಾ ಮೂಲದ ಇಬ್ಬರನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

ನೈಜೀರಿಯಾ ಮೂಲದ ಟೋನಿ (35), ಉಬಾಕಾ (36) ಬಂಧಿತ ಆರೋಪಿಗಳು. ಬಾಣಸವಾಡಿ ಠಾಣೆ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
ಸಂತ್ರಸ್ತ ಯುವತಿ ಕಲಬುರಗಿ ಮೂಲದವರಾಗಿದ್ದು, ನಗರದ ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟ್‍ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಸಂತ್ರಸ್ತ ಯುವತಿಗೆ ಹಲವು ವರ್ಷಗಳಿಂದ ನೈಜೀರಿಯಾ ಪ್ರಜೆ ಟೋನಿ ಪರಿಚಿತನಾಗಿದ್ದ. ಮತ್ತೋರ್ವ ಆರೋಪಿ ಉಬಾಕಾ ಹಲವು ಬಾರಿ ಯುವತಿಯನ್ನು ಪರಿಚಯ ಮಾಡಿಕೊಳ್ಳಲು ಯತ್ನಿಸಿದ್ದ. ಆದರೆ ಇಬ್ಬರ ನಡುವೆ ವೈಷಮ್ಯ ಉಂಟಾಗಿತ್ತು. ಆ.29ರಂದು ಟೋನಿ ಯುವತಿಯನ್ನು ಸ್ನೇಹಿತರ ಮನೆಗೆ ಹೋಗೋಣ ಎಂದು ಉಬಾಕಾ ಮನೆಗೆ ಕರೆದುಕೊಂಡು ಹೋಗಿದ್ದ.
ಉಬಾಕಾನನ್ನು ನೋಡಿದ ಯುವತಿ, ಟೋನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಳು. ಟೋನಿ ಯುವತಿಯನ್ನು ಸಮಾಧಾನಪಡಿಸಿ ಮೂವರು ಜೊತೆಗೆ ಕುಳಿತು ಮದ್ಯ ಸೇವಿಸಿದ್ದರು. ಕುಡಿದ ಮತ್ತಿನಲ್ಲಿದ್ದಾಗ ನನ್ನ ಮೇಲೆ ಅತ್ಯಾಚಾರ ನಡೆದಿದೆ. ನನಗೆ ಪ್ರಜ್ಞೆ ಬಂದಾಗ ತನ್ನ ಜೊತೆ ಉಬಾಕ ಬೆತ್ತಲೆಯಾಗಿದ್ದ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ.

ಯುವತಿಗೆ ಹಲವು ಮಂದಿ ಆಫ್ರಿಕಾ ಪ್ರಜೆಗಳು ಸ್ನೇಹಿತರಿರೋದು ಬೆಳಕಿಗೆ ಬಂದಿದೆ. ಸಂತ್ರಸ್ತ ಯುವತಿಯ ಮೊಬೈಲ್‍ನಲ್ಲಿ ಹಲವು ನೈಜರಿಯನ್ ನಂಬರ್‍ಗಳು ಪತ್ತೆಯಾಗಿವೆ. ಆಫ್ರಿಕಾ ಪ್ರಜೆಗಳ ಜೊತೆ ಯಾವ ಕಾರಣಕ್ಕೆ ಒಡನಾಟ ಹೊಂದಿದ್ದರು ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೆಪ್ಟೆಂಬರ್ 7ರವರೆಗೂ ಈ ರಾಜ್ಯಗಳಲ್ಲಿ ಮಳೆ ಮುನ್ಸೂಚನೆ