Select Your Language

Notifications

webdunia
webdunia
webdunia
webdunia

ಎಣ್ಣೆ ಪಾರ್ಟಿ ಮಾಡಿದ ನಂತರ ಇಬ್ಬರ ಬರ್ಬರ ಹತ್ಯೆ

bengaluru
bengaluru , ಬುಧವಾರ, 1 ಸೆಪ್ಟಂಬರ್ 2021 (14:51 IST)
ಕುಡಿದ ಮತ್ತಿನಲ್ಲಿ ಶುರುವಾದ ಗಲಾಟೆಯಲ್ಲಿ ಇಬ್ಬರ ಬರ್ಬರ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಬಳಿ ನಡೆದಿದೆ.

ಹೆಬ್ಬಗೋಡಿ ಪೋಲಿಸ್ ಠಾಣಾ ವ್ಯಾಪ್ತಿಯ ಸಿಂಗೇನಾ ಅಗ್ರಹಾರದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಇಬ್ಬರು ವ್ಯಕ್ತಿಗಳನ್ನು ಕೊಲೆ ಮಾಡಲಾಗಿದ್ದು, ಮೃತರ ಗುರುತು ಪತ್ತೆಯಾಗಿಲ್ಲ.
ಎಣ್ಣೆ ಪಾರ್ಟಿ ಮಾಡಿದ ಬಳಿಕ ಮಾರಾಕಾಸ್ತ್ರಗಳಿಂದ ಕೊಲೆ ದುಷ್ಕರ್ಮಿಗಳು ಪರಾರಿಯಾಗಿದ್ದು, ಎಣ್ಣೆ ಪಾರ್ಟಿಗೆ ಬಂದಿದ್ದ ಸ್ನೇಹಿತರಿಂದಲೇ ಈ ಕೃತ್ಯ ನಡೆದಿರುವ ಶಂಕೆ ಇದೆ.
ಶವ ಬಿದ್ದಿರುವ ಜಾಗದಲ್ಲಿ ಮದ್ಯದ ಬಾಟಲಿಗಳು ಕಂಡು ಬಂದಿದ್ದು, ಮೇಲ್ನೋಟಕ್ಕೆ ಮೃತರು ಉತ್ತರ ಭಾರತದ ಕೂಲಿ ಕಾರ್ಮಿಕರು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಹಾಗೂ ಎಸ್ಪಿ ವಂಶಿಕೃಷ್ಣ ಬೇಟಿ ಪರಿಶೀಲನೆ ನಡೆಸಿದ್ದು, ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇಶ ವಿರೋಧಿ ಚಟುವಟಿಕೆ ನಡೆಸೋರ ವಿರುದ್ಧ ಪೊಲೀಸ್ ಇಲಾಖೆ ಹದ್ದಿನ ಕಣ್ಣು - ಬೊಮ್ಮಾಯಿ