Select Your Language

Notifications

webdunia
webdunia
webdunia
webdunia

ಪತಿ ಹಿಂಬಾಲಿಸಿದ ಪತ್ನಿಗೆ ಕಾದಿತ್ತು ಶಾಕ್!

ಪತಿ ಹಿಂಬಾಲಿಸಿದ ಪತ್ನಿಗೆ ಕಾದಿತ್ತು ಶಾಕ್!
ಹೈದರಾಬಾದ್ , ಭಾನುವಾರ, 12 ಡಿಸೆಂಬರ್ 2021 (19:37 IST)
ಹೈದರಾಬಾದ್ : ಬೇರೆ ಹೆಂಗಸಿನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಪತಿ ರೆಡ್ಹ್ಯಾಂಡ್ ಆಗಿ ಪತ್ನಿಯ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಹೈದರಾಬಾದ್ನ ಜಗದ್ದಿರಿಗುಟ್ಟದಲ್ಲಿ ನಡೆದಿದೆ.

ಅನಿಲ್ ಜಗದ್ದಿರಿಗುಟ್ಟದ ನಿವಾಸಿಯಾಗಿದ್ದಾನೆ. ಈತ ರಾಮೇಶ್ವರಿಯನ್ನು ಮದುವೆಯಾಗಿದ್ದನು. ಆದರೆ ಈತನ ನಡುವಳಿಕೆಯಲ್ಲಿ ಬದಲಾವಣೆ ಕಂಡಿರುವ ಪತ್ನಿ, ಆತನನ್ನು ಹಿಂಬಾಲಿಸಿದಾಗ ಆತನ ಅನೈತಿಕ ಸಂಬಂಧದ ಕುರಿತಾಗಿ ತಿಳಿದುಬಂದಿದೆ.  

ಅನಿಲ್ ಕುಟ್ಟಬಲ್ಪುರ್ ಬ್ಯಾಂಕ್ ಕಾಲನಿಯಲ್ಲಿರುವ ಮತ್ತೊಂದು ಮಹಿಳೆ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದನು. ಕಳೆದ ಕೆಲವು ದಿನಗಳಿಂದ ಗಂಡನ ನಡುವಳಿಕೆಯಲ್ಲಿ ಆಗುತ್ತಿರುವ ಬದಲಾವಣೆಯನ್ನು ರಾಮೇಶ್ವರಿ ಗಮನಿಸಿದ್ದಾಳೆ. 
ಒಂದು ದಿನ ಪತಿಯನ್ನು ಹಿಂಬಾಲಿಸಿದ್ದಾಳೆ. ಆಗ ಅನಿಲ್ ಬೇರೆ ಯುವತಿಯ ಜೊತೆಗೆ ಇರುವುದನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾಳೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಚಿಕ್ಕಮಗಳೂರಿನ ಶಾಲೆಯಲ್ಲಿ 10 ವಿದ್ಯಾರ್ಥಿಗಳು ಸೇರಿ 11 ಮಂದಿಗೆ ಸೋಂಕು