Select Your Language

Notifications

webdunia
webdunia
webdunia
webdunia

ಹಣಕ್ಕಾಗಿ ತನ್ನ ಸ್ನೇಹಿತನನ್ನೇ ಕೊಂದ!

ಹಣಕ್ಕಾಗಿ ತನ್ನ ಸ್ನೇಹಿತನನ್ನೇ ಕೊಂದ!
ಹೈದರಾಬಾದ್ , ಸೋಮವಾರ, 6 ಡಿಸೆಂಬರ್ 2021 (09:51 IST)
ಹೈದರಾಬಾದ್ : ಹಣ ಅಂದ್ರೆ ಹೆಣನೂ ಬಾಯಿ ಬಿಡುತ್ತೆ ಅನ್ನೋ ಗಾದೆ ಮಾತಿದೆ.
ಈ ಹಣದ ಮೇಲಿನ ಮೋಹ ಮಿತಿ ಮೀರಿದಾಗ ಎಲ್ಲವೂ ಕೈ ತಪ್ಪಿ ಹೋಗುತ್ತೆ ಅನ್ನೋದಕ್ಕೆ ಸಾಕ್ಷಿ ಈ ಕೊಲೆ. ಇದೇ ವಿಚಾರಕ್ಕೆ ಯುವಕನೊಬ್ಬ ತನ್ನ ಸ್ನೇಹಿತನನ್ನೇ ಕೊಲೆ ಮಾಡಿದ್ದಾನೆ.
ನಾಗಪವನ್ ಹಾಗೂ ನಾಗಸಾಯಿ ಇಬ್ಬರೂ ಗೆಳೆಯರಾಗಿದ್ದರು. ನವೆಂಬರ್ 24 ರಂದು ಇಬ್ಬರ ನಡುವೆ ಖರ್ಚಿನ ವಿಚಾರವಾಗಿ ಜಗಳವಾಗಿತ್ತು. ಮಾತಿಗೆ ಮಾತು ಬೆಳೆದು ಕೋಪಗೊಂಡ ನಾಗಪವನ್, ನಾಗಸಾಯಿಯ ಕುತ್ತಿಗೆ ಹಾಗೂ ಹೊಟ್ಟೆಗೆ ಚಾಕುವಿನಿಂದ ಇರಿದಿದಿದ್ದಾನೆ. ಪರಿಣಾಮ ನಾಗಸಾಯಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಡಿಸೆಂಬರ್ 3 ರಂದು ಸಂಜೆ ಮತ್ತೋರ್ವ ಸ್ನೇಹಿತನೊಂದಿಗೆ ಬಂದು ಸೇರಿ ಶವದ ಮೇಲೆ ಹೊದಿಕೆ ಹಾಕಿ ಬಾತ್ರೂಮ್ನಲ್ಲಿ ಸುಡಲು ಪ್ರಯತ್ನಿಸಿದ್ದಾನೆ. ಆದರೆ ಈ ಮಧ್ಯೆ ಮನೆಯಿಂದ ತೀವ್ರ ದುರ್ವಾಸನೆ ಬರುತ್ತಿದ್ದ ಕಾರಣ ಅಕ್ಕಪಕ್ಕದ ಮನೆಯವರು ಬಂದು ಏನಿಷ್ಟು ವಾಸನೆ ಎಂದು ಕೇಳಿದಾಗ ಹಂದಿ ಸಾವನ್ನಪ್ಪಿದ್ದು ಎಂದು ಸ್ಥಳೀಯರಿಗೆ ಹೇಳಿ ಪರಾರಿಯಾಗಿದ್ದಾರೆ. 
ಇಬ್ಬರ ವರ್ತನೆಯಿಂದ ಅನುಮಾನಗೊಂಡ ಸ್ಥಳೀಯರು ಅನುಮಾನಗೊಂಡು ರಾಜನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವಿಚಾರ ತಿಳಿದ ಬಳಿಕ ಡಿಎಸ್ಪಿ ಎಟಿವಿ ರವಿಕುಮಾರ್ ಅಕ್ಕಪಕ್ಕದ ಮನೆಯವರನ್ನು ವಿಚಾರಿಸಲಾಗಿದೆ. ವಿಚಾರಣೆ ಸಂದರ್ಭದಲ್ಲಿ ಯುವಕರು ದುಶ್ಚಟಗಳನ್ನು ಮಾಡುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಈ ಕುರಿತು ತನಿಖೆ ನಡೆಸುತ್ತಿದ್ದು ಆದಷ್ಟು ಬೇಗ ನಾಗಪವನ್ ಮತ್ತು ಆತನ ಸ್ನೇಹಿತನನ್ನು ಪತ್ತೆ ಹಚ್ಚುತ್ತೇವೆ ಎಂದು ರವಿಕುಮಾರ್ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಯಾವ ಸ್ಥಳಗಳಿಗೆ ತೆರಳಲು 2 ಡೋಸ್ ಕಡ್ಡಾಯ?