Select Your Language

Notifications

webdunia
webdunia
webdunia
webdunia

ಯಾವ ಸ್ಥಳಗಳಿಗೆ ತೆರಳಲು 2 ಡೋಸ್ ಕಡ್ಡಾಯ?

ಯಾವ ಸ್ಥಳಗಳಿಗೆ ತೆರಳಲು 2 ಡೋಸ್ ಕಡ್ಡಾಯ?
ಬೆಂಗಳೂರು , ಸೋಮವಾರ, 6 ಡಿಸೆಂಬರ್ 2021 (09:41 IST)
ವಿಶ್ವದ 15ಕ್ಕೂ ಹೆಚ್ಚು ದೇಶಗಳಲ್ಲಿ ಕಂಡು ಬಂದಿರುವ ಓಮೈಕ್ರಾನ್ ಹರಡುವಿಕೆ ವೇಗ ಹೆಚ್ಚು ಎಂದು ವರದಿಯಾಗುತ್ತಿದೆ.
ಹಾಗಾಗಿ ಭಾರತ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ಮತ್ತೊಂದು ಕಡೆ ಜನರಿಗೆ ವ್ಯಾಕ್ಸಿನ್ ನೀಡುವ ಪ್ರಕ್ರಿಯೆಗೆ ಚುರುಕು ಮುಟ್ಟಿಸಿದೆ. ಓಮೈಕ್ರಾನ್ ರೂಪಾಂತರಿ ಹಿನ್ನೆಲೆ ಸಾರ್ವಜನಿಕ  ಸ್ಥಳಗಳಲ್ಲಿ ತೆರಳುವ ಜನರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆದಿರಬೇಕು.
ಪ್ರವೇಶ ದ್ವಾರದಲ್ಲಿಯೇ ಲಸಿಕೆ ಪಡೆದಿರುವ ಸರ್ಟಿಫಿಕೇಟ್  ತೋರಿಸಬೇಕೆಂದು ಬಿಬಿಎಂಪಿ ಅಧಿಕೃತ ಸುತ್ತೋಲೆ ಹೊರಡಿಸಿದೆ.ಮಾಲ್, ಥಿಯೇಟರ್, ಮಲ್ಟಿಪ್ಲೆಕ್ಸ್ ಗಳಲ್ಲಿ ಎರಡು ಡೋಸ್ ಕಡ್ಡಾಯ ಮಾಡಲಾಗಿದೆ.
ಸಿನಿಮಾ  ನೋಡಲು, ಶಾಪಿಂಗ್ ಮಾಡಲು ಹೋಗುವ ಮುನ್ನ ಎರಡು ಡೋಸ್ ಕಡ್ಡಾಯ ಪಡೆದಿರಬೇಕು.  ಬಿಗ್ ಬಜಾರ್, ಕ್ಲಾತ್ ಸೆಂಟರ್ಸ್, ದೊಡ್ಡ ದೊಡ್ಡ ಬ್ರಾಂಡ್ ಶೂ ರೂಮ್ ಗಳು, ಶಾಪಿಂಗ್ ಕಾಂಪ್ಲೆಕ್ಸ್ ಗಳ ಎಂಟ್ರಿಗೂ ಎರಡು ಡೋಸ್ ವ್ಯಾಕ್ಸಿನ್ ಆಗಿರಬೇಕೆಂದು ಬಿಬಿಎಂಪಿ ಹೇಳಿದೆ.
 “ಪ್ರತಿಯೊಬ್ಬರೂ ತಮ್ಮ ಸ್ಮಾರ್ಟ್ಫೋನ್ಗಳಲ್ಲಿ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ಹೊಂದಿದ್ದಾರೆ. ನಿಯಮಿತ ಕಡ್ಡಾಯ ಕೋವಿಡ್ ಸ್ಕ್ರೀನಿಂಗ್ ಜೊತೆಗೆ ಅವರು ಪ್ರವೇಶದ ಮೊದಲು ವ್ಯಾಕ್ಸಿನ್ ಪ್ರಮಾಣ ಪತ್ರ  ತೋರಿಸಬೇಕು. ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರುಪೇರಾಗುತ್ತಿದ್ದು, ಹೊಸ ರೂಪುರೇಷೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಬಿಬಿಎಂಪಿ ಹೇಳಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರು ವರ್ಷದ ಮಗುವಿನ ಮೇಲೆ ಇದೆಂಥಾ ಲೈಂಗಿಕ ಕ್ರೌರ್ಯ?!