Select Your Language

Notifications

webdunia
webdunia
webdunia
webdunia

ಕಾರಿನಲ್ಲಿದ್ದ 10 ಲಕ್ಷ ರೂ. ಲಪಟಾಯಿಸಿರುವ ಕಳ್ಳರು

ಕಾರಿನಲ್ಲಿದ್ದ 10 ಲಕ್ಷ ರೂ.  ಲಪಟಾಯಿಸಿರುವ ಕಳ್ಳರು
bangalore , ಸೋಮವಾರ, 13 ಡಿಸೆಂಬರ್ 2021 (20:30 IST)
ಮಾಲೀಕರ ಮೊಮ್ಮಗಳ ವಿವಾಹ ಸಮಾರಂಭದ ಖರ್ಚಿಗಾಗಿ ಬ್ಯಾಂಕ್‍ನಿಂದ ಡ್ರಾ ಮಾಡಿದ್ದ 10 ಲಕ್ಷ ರೂ. ಹಣವನ್ನು ಕಾರಿನಲ್ಲಿಟ್ಟು ಟೀ ಕುಡಿಯಲು ಹೋದ ವೇಳೆ ಕಳ್ಳರು ಲಪಟಾಯಿಸಿರುವ ಘಟನೆ ಚಂದ್ರಲೇಔಟ್ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 
ಕೆಂಗೇರಿ ನಿವಾಸಿ ಶ್ರೀನಿವಾಸನ್ ಹಣ ಕಳೆದುಕೊಂಡವರು. ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಚಂದ್ರಲೇಔಟ್ ಠಾಣೆ ಪೆÇಲೀಸರು ತಿಳಿಸಿದರು. 
ಚಂದ್ರಲೇಔಟ್‍ನಲ್ಲಿ ಜಯಪ್ರಕಾಶ್ ಶೆಟ್ಟಿ ಎಂಬುವವರಿಗೆ ಸೇರಿದ ಅಪಾರ್ಟ್‍ಮೆಂಟ್‍ನಲ್ಲಿ ಶ್ರೀನಿವಾಸ್ ಮ್ಯಾನೇಜರ್ ಆಗಿದ್ದರು. ಜಯಪ್ರಕಾಶ್ ಶೆಟ್ಟಿ ಮೊಮ್ಮಗಳ ವಿವಾಹ
ಸಮಾರಂಭಕ್ಕೆ ಹಣದ ಅವಶ್ಯಕತೆಯಿದ್ದ ಹಿನ್ನೆಲೆಯಲ್ಲಿ ಬ್ಯಾಂಕ್‍ನಿಂದ ಹಣ ಡ್ರಾ ಮಾಡಿಕೊಂಡು ಬರುವಂತೆ ಶ್ರೀನಿವಾಸನ್‍ಗೆ ಡಿ.9ರಂದು ಸೂಚಿಸಿದ್ದರು. ಅದರಂತೆ ಜಯಪ್ರಕಾಶ್ ಶೆಟ್ಟಿ ಅವರ ಸ್ಕೋಡಾ ಕಾರಿನಲ್ಲಿ ಚಾಲಕನೊಂದಿಗೆ ಶ್ರೀನಿವಾಸ್ ಚಂದ್ರಲೇಔಟ್‍ನಲ್ಲಿರುವ 2 ಬ್ಯಾಂಕ್‍ಗಳಿಗೆ ತೆರಳಿ ಒಟ್ಟು 10 ಲಕ್ಷ ರೂ. ಹಣವನ್ನು ಡ್ರಾ ಮಾಡಿಕೊಂಡು ಮನೆಗೆ ಹಿಂತಿರುಗುತ್ತಿದ್ದರು. ಮಾರ್ಗಮದ್ಯೆ ಅತ್ತಿಗುಪ್ಪೆ ಬಳಿ ಕಾರಿನ ಟೈಯರ್ ಪಂಚರ್ ಆಗಿತ್ತು. ಟೈಯರ್ ಬದಲಾಯಿಸಿಕೊಂಡು ಚಂದ್ರಲೇಔಟ್ 60 ಅಡಿರಸ್ತೆ, ಸ್ಪಿರಿಟ್ ಜಂಕ್ಷನ್ ಬಳಿ  ಕಾರನ್ನು ರಸ್ತೆ ಬದಿ ನಿಲುಗಡೆ ಮಾಡಿ ಚಾಲಕನ ಜತೆಗೆ ಶ್ರೀನಿವಾಸ್ ಟೀ ಕುಡಿಯಲು ಹೋಗಿದ್ದರು. ಆ ವೇಳೆ ಕಾರಿನ ಮಂಭಾಗದ ಬಾಗಿಲಿನ ಗ್ಲಾಸ್ ಒಡೆದ ಕಳ್ಳರು 10 ಲಕ್ಷ ರೂ. ಹಣವಿದ್ದ ಬ್ಯಾಗ್‍ನೊಂದಿಗೆ ಪರಾರಿಯಾಗಿದ್ದಾರೆ. ಶ್ರೀನಿವಾಸ್ ಟೀ ಕುಡಿದು ವಾಪಾಸಾದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಬಳಿಕ ಚಂದ್ರಲೇಔಟ್ ಪೆÇಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು, ಸ್ಥಳೀಯ ಸಿಸಿಕ್ಯಾಮರಾ ಪರಿಶೀಲಿಸಿರುವ ಪೆÇಲೀಸರು ಆರೋಪಿಗಳಿಗೆ ಶೋಧ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅನ್ನದಾತರ ಸಮಸ್ಯೆಗೆ ಕೂಗಾದ ಮಾಜಿ ಪ್ರಧಾನಿ, ಭತ್ತದ ತಳಿಗೆ 'ದೇವೇಗೌಡ'ರ ಹೆಸರಿಟ್ಟ ಪಂಜಾಬ್ ರೈತರು.!