Select Your Language

Notifications

webdunia
webdunia
webdunia
webdunia

ಸಿಎಂ ಬದಲಾವಣೆ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡ ಕಾಂಗ್ರೆಸ್ ಹೈಕಮಾಂಡ್: ಡಿಕೆಶಿ ನಡೆಯೇನು

Siddaramaiah-DK Shivakumar

Krishnaveni K

ಬೆಂಗಳೂರು , ಗುರುವಾರ, 11 ಡಿಸೆಂಬರ್ 2025 (13:37 IST)
ಬೆಂಗಳೂರು: ಸಿಎಂ ಬದಲಾವಣೆ ವಿಚಾರವಾಗಿ ಕಾಂಗ್ರೆಸ್ ಹೈಕಮಾಂಡ್ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು, ಡಿಕೆಶಿ ಮುಂದಿನ ನಡೆಯೇನು ಎಂಬುದು ಬಹಿರಂಗವಾಗಿದೆ.

ಸಿಎಂ ಬದಲಾವಣೆ ವಿಚಾರ ಇನ್ನೂ ತಣ್ಣಗಾಗಿಲ್ಲ. ಸದ್ಯಕ್ಕೆ ಅಧಿವೇಶನ ನಡೆಯುತ್ತಿದೆ ಎಂಬ ಕಾರಣಕ್ಕಷ್ಟೇ ರಾಜ್ಯದ ನಾಯಕರು ಸುಮ್ಮನಾಗಿದ್ದಾರೆ. ಆದರೆ ಅಧಿವೇಶನ ಮುಗಿದ ಬಳಿಕ ಈ ವಿಚಾರ ಮತ್ತೆ ಭುಗಿಲೇಳಲಿದೆ. ಈಗಾಗಲೇ ಹೈಕಮಾಂಡ್ ಕೂಡಾ ಅಧಿವೇಶನ ಮುಗಿದ ತಕ್ಷಣ ಈ ವಿಚಾರವನ್ನು ನಿರ್ಧಾರ ಮಾಡುವುದಾಗಿ ತಿಳಿಸಿದೆ.

ಡಿಸೆಂಬರ್ 20-21 ರಂದು ದೆಹಲಿಯಲ್ಲಿ ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ. ಈ ಸಭೆಯಲ್ಲಿ ರಾಜ್ಯದ ನಾಯಕತ್ವ ಬದಲಾವಣೆ ವಿಚಾರ ಅಂತಿಮವಾಗಲಿದೆ.

ಈ ಸಭೆಯಲ್ಲಿ ಡಿಕೆ ಶಿವಕುಮಾರ್ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. ಇನ್ನು, ಸಿದ್ದರಾಮಯ್ಯ ಕೂಡಾ ಈ ಸಭೆಗೆ ತಯಾರಾಗುತ್ತಿದ್ದು ಇದರ ಪೂರ್ವಭಾವಿಯಾಗಿಯೇ ನಿನ್ನೆ ಬೆಳಗಾವಿಯಲ್ಲಿ ಅಹಿಂದ ನಾಯಕರ ಸಭೆ ನಡೆದಿದೆ ಎನ್ನಲಾಗಿದೆ. ಹೀಗಾಗಿ ಅಧಿವೇಶನ ಮುಗಿದ ಬಳಿಕ ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುವುದು ಖಚಿತವಾಗಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

Arecanut Price: ಅಡಿಕೆ, ಕೊಬ್ಬರಿ ಇಂದಿನ ಬೆಲೆ ಇಲ್ಲಿದೆ