ಬೆಳಗಾವಿ: ವಿಧಾನಸಭೆ ಅಧಿವೇಶನದ ನಡುವೆ ಸದನದಲ್ಲೇ ನಿದ್ದೆ ಹೋದ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ವಿಪಕ್ಷ ನಾಯಕ ಆರ್ ಅಶೋಕ್ ಕಿಚಾಯಿಸಿದ್ದಾರೆ.
ಸದನದಲ್ಲೇ ಡಿಕೆಶಿ ನಿದ್ರಿಸುತ್ತಿರುವ ಫೋಟೋ ಹಂಚಿಕೊಂಡ ಆರ್ ಅಶೋಕ್, ಪಾಪ ಬಹುಶಃ ಕುರ್ಚಿ ಸಿಗದ ನಿರಾಸೆಯಿಂದ ರಾತ್ರಿಯೆಲ್ಲಾ ನಿದ್ರೆಯಿಲ್ಲ ಎನಿಸುತ್ತದೆ ಎಂದು ಕಾಲೆಳೆದಿದ್ದಾರೆ. ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಕೇಂದ್ರ ಸರ್ಕಾರವೇ ಉತ್ತರ ಕೊಡಬೇಕು ಎಂದು ಜಾರಿಕೊಂಡು ಸದನದಲ್ಲೇ ಪ್ರಗಾಢ ನಿದ್ರೆಗೆ ಜಾರಿರುವ ಡಿಸಿಎಂ ಡಿಕೆ ಶಿವಕುಮಾರ್ ಸಾಹೇಬರಿಗೆ ಪಾಪ ಸಿಎಂ ಕುರ್ಚಿ ಸಿಗದ ನಿರಾಸೆಯಿಂದ ರಾತ್ರಿಯೆಲ್ಲ ನಿದ್ದೆ ಬರುತ್ತಿಲ್ಲ ಅನ್ನಿಸುತ್ತೆ. ಹಾಗಾಗಿ ಸದನದಲ್ಲೇ ವಿಶ್ರಾಂತಿ ಪಡೆಯುತ್ತಿರಬೇಕು.
"ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ", ಎಂದು ಸ್ವಾಮಿ ವಿವೇಕಾನಂದರು ಕರೆ ಕೊಟ್ಟಿದ್ದರು. ಆದರೆ ಕಾಂಗ್ರೆಸ್ ನಾಯಕರ ವರಸೆ "ಮಲಗಿ, ಮಲಗಿರಿ, ಜನ ಒದ್ದೋಡಿಸುವವರೆಗೂ ಎಳೆಬೇಡಿ" ಎನ್ನುವಂತಿದೆ ಎಂದು ವ್ಯಂಗ್ಯ ಮಾಡಿದ್ದಾರೆ.