ಬೆಳಗಾವಿ: ಹಲವು ಅಪರಾಧಗಳಲ್ಲಿ ಭಾಗಿಯಾಗಿರುವ ಬಜರಂಗದಳವನ್ನು ರಾಜ್ಯದಲ್ಲಿ ನಿಷೇಧಿಸಬೇಕೆಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಅವರು ಬುಧವಾರ ಹೇಳಿದರು.
ಅವರು ಪಿಟಿಐ ವಿಡಿಯೋ ಮೂಲಕ ತಿಳಿಸಿದ್ದಾರೆ. ತಮ್ಮ ಈ ಬೇಡಿಕೆಯನ್ನು ಈಡೇರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇನೆ. ಏಕೆಂದರೆ ಬಜರಂಗದಳ ನಿಷೇಧ ಸಹ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯ ಭಾಗವಾಗಿತ್ತು ಎಂದಿದ್ದಾರೆ.
ಬಜರಂಗದಳದ ಚಟುವಟಿಕೆಗಳು ಕರ್ನಾಟಕದಲ್ಲಿ ಹೊಸದಲ್ಲ. ನಮ್ಮ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಒಬ್ಬರಾದ ಗಣೇಶ್ ಗೌಡ ಅವರನ್ನು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಾಡಲಾಯಿತು. ಅವರನ್ನು ಬಜರಂಗದಳ ಕಾರ್ಯಕರ್ತರೇ ಕೊಂದರು. ಬಜರಂಗದಳ ಕಾರ್ಯಕರ್ತರು ಹಲವಾರು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಹರಿಪ್ರಸಾದ್ ದೂರಿದರು.
"2016 ಅಥವಾ 17 ರ ಹಿಂದೆ ಉಡುಪಿಯಲ್ಲಿ, ಬಿಜೆಪಿ ಮಂಡಲ ಅಧ್ಯಕ್ಷ, ಹಿಂದೂ ಒಬ್ಬರನ್ನು ಅದೇ ಸಂಘಟನೆ, ಹಿಂದೂ ಜಾಗರಣ್ ವೇದಿಕೆ ಸೇರಿ ಕೊಲ್ಲಲಾಯಿತು ಎಂದು ಆರೋಪ ಮಾಡಿದರು.
ಈ ಹಿನ್ನೆಲೆ ಶಾಂತಿಯುತಾ ನಾಗರಿಕ ಸಮಾಜಕ್ಕೆ ಬೆದರಿಕೆಯಾಗಿರುವ ಈ ಸಂಘಟನೆಗಳನ್ನು ಸರ್ಕಾರ ನಿಷೇಧಿಸಬೇಕು ಎಂದು ಅವರು ಹೇಳಿದರು.