Publish Date: Mon, 24 Jun 2019 (20:35 IST)
Updated Date: Mon, 24 Jun 2019 (20:38 IST)
ರಾಜಕಾರಣಿ ಆಗಿರುವ ಮುಖ್ಯಮಂತ್ರಿಗೆ ಇಂದು ಹೃದಯಾಘಾತ ಸಂಭವಿಸಿದ್ದು, ಅವರನ್ನು ಚಿಕಿತ್ಸೆಗಾಗಿ ಜಯದೇವ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹಿರಿಯ ರಾಜಕಾರಣಿ ಹಾಗೂ ಹಿರಿಯ ಕಲಾವಿದರಾಗಿರುವ ಮುಖ್ಯಮಂತ್ರಿ ಚಂದ್ರು ಅವರಿಗೆ ಹೃದಯಾಘಾತ ಸಂಭವಿಸಿದೆ.
ಕಳೆದ ಕೆಲವು ವರ್ಷಗಳಿಂದಲೂ ಹೃದಯಾಘಾತ ಮುಖ್ಯಮಂತ್ರಿ ಚಂದ್ರು ಅವರಿಗೆ ಆಗುತ್ತಿತ್ತು. ಈಗಾಗಲೆ ಎರಡು ಬಾರಿ ಲಘ ಹೃದಯಾಘಾತ ಸಂಭವಿಸಿತ್ತು ಎನ್ನಲಾಗಿದೆ.
ಇವತ್ತು ಹೃದಯಾಘಾತ ಮತ್ತೆ ಮರುಕಳಿಸಿದೆ. ಜೆಪಿ ನಗರದಲ್ಲಿರುವ ಜಯದೇವ ಆಸ್ಪತ್ರೆಗೆ ಮುಖ್ಯಮಂತ್ರಿ ಚಂದ್ರು ಅವರನ್ನು ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.