Publish Date: Fri, 22 Jun 2018 (10:08 IST)
Updated Date: Fri, 22 Jun 2018 (10:09 IST)
ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿರುವ ಕಾಂಗ್ರೆಸ್ ನ ಡಿಕೆ ಶಿವಕುಮಾರ್ ಮತ್ತು ಜೆಡಿಎಸ್ ನ ಎಚ್ ಡಿ ರೇವಣ್ಣ ನಡುವೆ ತೆರೆ ಮರೆಯ ಗುದ್ದಾಟ ನಡೆಯುತ್ತಿರುತ್ತದೆ ಎಂಬ ವದಂತಿಗಳಿಗೆ ರೇವಣ್ಣ ಸ್ಪಷ್ಟನೆ ನೀಡಿದ್ದಾರೆ.
ಲೋಕೋಪಯೋಗಿ ಇಲಾಖೆ ಸಚಿವ ರೇವಣ್ಣ ತಮ್ಮ ಇಲಾಖೆಗಳಲ್ಲೂ ಹಸ್ತಕ್ಷೇಪ ಮಾಡುತ್ತಾರೆ ಎಂದು ಜಲಸಂಪನ್ಮೂಲ ಮತ್ತ ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್ ಅಸಮಾಧಾನ ಹೊಂದಿದ್ದಾರೆಂಬ ಸುದ್ದಿಯಿತ್ತು.
ಇದು ಮೊನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲೂ ಕಂಡುಬಂದಿತ್ತು. ಆದರೆ ಇದೀಗ ಮಾಧ್ಯಮಗಳೊಂದಿಗೆ ಈ ಪ್ರಶ್ನೆಗೆ ಉತ್ತರಿಸಿದ ರೇವಣ್ಣ ‘ನಾನು ಡಿಕೆಶಿ ಚೆನ್ನಾಗಿಯೇ ಇದ್ದೇವೆ. ಮಾಧ್ಯಮದವರು ಪ್ರಚಾರ ಮಾಡಿದರೆ ನಾನೇನು ಮಾಡಲಿ?’ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ತಾವು ಸೂಪರ್ ಸಿಎಂ ಎಂಬ ಟೀಕೆಗಳಿಗೆ ಉತ್ತರಿಸಿದ ಅವರು ನಾನ್ಯಾಕೆ ಸೂಪರ್ ಸಿಎಂ ಆಗಲಿ. ಹಾಗೊಂದು ವೇಳೆ ಹಿರಿಯರು ಹೇಳಿದರೆ ಅದನ್ನೇ ಆಶೀರ್ವಾದ ಅಂದುಕೊಳ್ಳುತ್ತೇನೆ’ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.