Publish Date: Wed, 09 May 2018 (09:13 IST)
Updated Date: Wed, 09 May 2018 (09:16 IST)
ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಸಿಎಂ ಗದ್ದುಗೆಗೆ ಏರುವ ಭರವಸೆಯಲ್ಲಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮೊದಲು ತಾನು ಮಾಡಲಿರುವ ಕೆಲಸವೇನೆಂದು ಹೇಳಿದ್ದಾರೆ.
ಹುಣಸೂರಿನಲ್ಲಿ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ ಸಿಎಂ ಆದ ತಕ್ಷಣ ಮೊದಲು ಮಾಡುವ ಕೆಲಸ ಎಂದರೆ ವಿಧಾನಸಭೆಯ 3 ನೇ ಮಹಡಿ ಕ್ಲೀನಿಂಗ್ ಮಾಡಿಸುತ್ತೇನೆ. ಕಮಿಷನ್ ದಂಧೆಗೆ ಕತ್ತರಿ ಹಾಕುತ್ತೇನೆ ಎಂದು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಬಗ್ಗೆ ಸೂಚನೆ ನೀಡಿದ್ದಾರೆ.
ಬಳಿಕ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ಅವರು ‘ಸಿದ್ದರಾಮಯ್ಯ ಸಿಎಂ ಆಗಲು ಮುಖ್ಯ ಪಾತ್ರ ವಹಿಸಿದವರು ಎಚ್ ವಿಶ್ವನಾಥ್. ಈಗ ವಿಶ್ವನಾಥ್ ಯಾರು ಎಂದು ಸಿದ್ದರಾಮಯ್ಯ ಕೇಳಬಹುದು’ ಎಂದು ಲೇವಡಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.