ಬೆಂಗಳೂರು: ಥಲಸ್ಸೆಮಿಯಾ ರೋಗಿಗಳಿಗೆ ಜೀವ ರಕ್ಷಕವಾಗಿರುವ ಚೆಲೇಶನ್
ಜಾರಿ ಮಾಡಿದೆ.
ಥಲಸ್ಸೆಮಿಯಾ ಎಂಬುದು ರಕ್ತ ಪರಿಚಲನೆ ಸಮಸ್ಯೆಯಿಂದಾಗುವ ಅಂಗವೈಕಲ್ಯ ಸಮಸ್ಯೆ. ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಚೆಲೇಶನ್ ಔಷಧಿ ಅತ್ಯಗತ್ಯವಾಗಿದೆ. ಈ ಔಷಧಿ ಸರ್ಕಾರಿ ಆಸ್ಪತ್ರೆಯಲ್ಲಿ ಪೂರೈಕೆ ಇಲ್ಲ. ಇದರಿಂದಾಗಿ ರೋಗಿಗಳು ಪರದಾಡುವಂತಾಗಿದೆ.ರೋಗಕ್ಕೆ ತುತ್ತಾದವರು ಪದೇ ಪದೇ ರಕ್ತ ಬದಲಾವಣೆ ಮಾಡಬೇಕಿರುತ್ತದೆ. ಪುನರಾವರ್ತಿತ ರಕ್ತ ಬದಲಾವಣೆಯಿಂದ ರಕ್ತದಲ್ಲಿ ಕಬ್ಬಿಣದ ಅಂಶ ಹೆಚ್ಚುತ್ತದೆ. ಈ ಹೆಚ್ಚುವರಿ ಕಬ್ಬಿಣದ ಅಂಶವನ್ನು ಚೆಲೇಶನ್ ಔಷಧಿ ಹೊರಹಾಕುತ್ತದೆ. ಆದರೆ, ಇತ್ತೀಚೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಔಷಧಿ ಪೂರೈಕೆ ಇಲ್ಲವಾಗಿದ್ದು, ರೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.ರಾಜ್ಯದಲ್ಲಿ ಈ ಕಾಯಿಲೆಗೆ ತುತ್ತಾಗಿರುವ 17 ಸಾವಿರ ರೋಗಿಗಳಿದ್ದಾರೆ. ಮಾರುಕಟ್ಟೆಯಲ್ಲಿ ಔಷಧಿಯ ಬೆಲೆ ಒಂದು ಸಾವಿರದಿಂದ ಒಂದೂವರೆ ಸಾವಿರದವರೆಗೆ ಇದೆ. ಹೀಗಾಗಿ, ಔಷಧಿ ಸಿಗದೆ ತೀವ್ರ ತೊಂದರೆ ಎದುರಿಸುತ್ತಿರುವ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಉಚಿತವಾಗಿ ಔಷಧಿ ಒದಗಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿಬೇಕು ಎಂದು ಅರ್ಜಿದಾರರು ಕೋರಿದ್ದಾರೆ.