Select Your Language

Notifications

webdunia
webdunia
webdunia
webdunia

ಚಾರ್ಮಾಡಿ ಘಾಟ್ ಪ್ರವಾಸಿಗರಿಗೆ ಸೂಕ್ತ ಕ್ರಮ!

ಚಾರ್ಮಾಡಿ ಘಾಟ್
ಚಿಕ್ಕಮಗಳೂರು : ಚಾರ್ಮಾಡಿ ಘಾಟಿಯ ಬಂಡೆಗಳ ಮೇಲೆ ಪ್ರವಾಸಿಗರು ಮೋಜು-ಮಸ್ತಿ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವಂತೆ ವಾಹನ ಸವಾರರು ಮನವಿ ಮಾಡಿಕೊಂಡಿದ್ದಾರೆ.

ರಸ್ತೆ ಮಧ್ಯೆ ಟ್ರಾಫಿಕ್ ಜಾಮ್ ಮಾಡ್ಕೊಂಡು ಟೂರಿಸ್ಟ್ ಗಳು ಡ್ಯಾನ್ಸ್ ಮಾಡುವ ಮೂಲಕ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದಾರೆ. ಕೆಲ ಪ್ರವಾಸಿಗರಿಗೆ ಟ್ರಾಫಿಕ್ ಜಾಮ್ ಮಾಡ್ಕೊಂಡು ರಸ್ತೆ ಮಧ್ಯೆ ಟಿಕ್ಟಾಕ್ ಮಾಡೋ ಶೋಕಿಯಾದ್ರೆ, ಇನ್ನೂ ಕೆಲವರು ಜಾರು ಬಂಡೆಗಳ ಮೇಲೆ ಹತ್ತಿ ಫೋಟೋಗೆ  ಪೋಸ್ ಕೊಡುತ್ತಿದ್ದಾರೆ.

ಸ್ವಲ್ಪ ಯಾಮಾರಿ ಜಾರಿ ಬಿದ್ದರೂ ಕೈ-ಕಾಲುಗಳಿಗೆ ಗಾಯಗಳಾಗುವ ಸಾಧ್ಯತೆಗಳಿವೆ. ಈ ಹಿಂದೆ ಬಿದ್ದು ಕೈ-ಕಾಲು ಮುರ್ಕೊಂಡು, ತಲೆ ಹೊಡೆದುಕೊಂಡಿರುವ ಹಾಗೂ ಪ್ರಾಣವೂ ಹೋದ ಉದಾಹರಣೆಗಳು ಸಾಕಷ್ಟಿವೆ.

ರಸ್ತೆ ಮಧ್ಯೆ ಯುವಕ-ಯುವತಿಯ ಮೋಜು-ಮಸ್ತಿಗೆ ವಾಹನ ಸವಾರರು ಬೇಸತ್ತು ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವಂತೆ ವಾಹನ ಸವಾರರು ಮನವಿ ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಪಠ್ಯಪುಸ್ತಕ ವಿರುದ್ದ ಡಿಕೆಶಿ ಕಿಡಿ