Select Your Language

Notifications

webdunia
webdunia
webdunia
webdunia

ಹಲಾಲ್ ಕಟ್ ಮಾಂಸ ತಿಂದಿಲ್ಲ, ತಿನ್ನೋದು ಇಲ್ಲ : ಈಶ್ವರಪ್ಪ

ಹಲಾಲ್ ಕಟ್ ಮಾಂಸ ತಿಂದಿಲ್ಲ, ತಿನ್ನೋದು ಇಲ್ಲ : ಈಶ್ವರಪ್ಪ
ಶಿವಮೊಗ್ಗ , ಬುಧವಾರ, 19 ಅಕ್ಟೋಬರ್ 2022 (16:14 IST)
ಶಿವಮೊಗ್ಗ : ನಾನು ನನ್ನ ಜೀವನದಲ್ಲಿ ಹಲಾಲ್ ಕಟ್ ಮಾಂಸ ತಿಂದಿಲ್ಲ, ಮುಂದೆಯೂ ತಿನ್ನುವುದಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಹಲಾಲ್ ಕಟ್, ಜಟಕಾ ಕಟ್ ಎಂಬ ಚರ್ಚೆ ನಡೆಯುತ್ತಿದೆ. ಆದರೆ ನನಗೆ ಹಲಾಲ್ ಕಟ್ಟೋ, ಹಲ್ಕ ಕಟ್ಟೋ ಗೊತ್ತಿಲ್ಲ. ನಾವು ಏಕೆ ನಮ್ಮ ದೇವರಿಗೆ ಹಲಾಲ್ ಕಟ್ ಮಾಂಸ ಎಡೆ ಇಡೋಣ ಎಂದರು.

ಹಲಾಲ್ನಿಂದ ಸಂಗ್ರಹವಾದ ಹಣವನ್ನು ಅವರು ಭಯೋತ್ಪಾದಕ ಕೃತ್ಯಕ್ಕೆ, ಬಾಂಬ್ ಹಾಕುವುದಕ್ಕೆ ಬಳಸುತ್ತಾರೆ. ಹಾಗಾಗಿ ಯುಗಾದಿ ಹಬ್ಬದ ಸಂದರ್ಭದಲ್ಲಿ ಈ ಅಭಿಯಾನ ಆರಂಭವಾಗಿತ್ತು.

ಇದೀಗ ದೀಪಾವಳಿ ಹಬ್ಬದಲ್ಲೂ ಈ ಅಭಿಯಾನ ಮತ್ತೆ ಗರಿಗೆದರಿದೆ. ಹಿಂದೂ ಸಮಾಜ ದಿನೇ ದಿನೇ ಈ ವಿಷಯದಲ್ಲಿ ಜಾಗೃತಗೊಳ್ಳುತ್ತಿದೆ ಎಂದು ಅಭಿಪ್ರಾಯಪಟ್ಟರು.


Share this Story:

Follow Webdunia kannada

ಮುಂದಿನ ಸುದ್ದಿ

ಖಾಸಗಿ ಬಸ್ ದರ ಯದ್ವಾತದ್ವಾ ಏರಿಕೆ