Select Your Language

Notifications

webdunia
webdunia
webdunia
webdunia

ಖಾಸಗಿ ಬಸ್ ದರ ಯದ್ವಾತದ್ವಾ ಏರಿಕೆ

ಖಾಸಗಿ ಬಸ್ ದರ ಯದ್ವಾತದ್ವಾ ಏರಿಕೆ
bangalore , ಬುಧವಾರ, 19 ಅಕ್ಟೋಬರ್ 2022 (16:00 IST)
ಖಾಸಗಿ ಬಸ್​ಗಳ ಆಟಾಟೋಪ ಇನ್ನೂ ನಿಂತಿಲ್ಲ. ಪ್ರತಿ ಹಬ್ಬ ಹರಿದಿನಗಳಲ್ಲಿ ಖಾಸಗಿ ಬಸ್ ಮಾಲೀಕರು ಹಗಲು ದರೋಡೆ ಮಾಡ್ತಿದ್ದು, ದುಪ್ಪಟ್ಟು ದರ ವಸೂಲಿ ಮಾಡಿದ್ರೆ ಪರ್ಮೀಟ್ ರದ್ದು ಎಚ್ಚರಿಕೆ ನೀಡಿದ್ರೂ ಕ್ಯಾರೆ ಎನ್ನದ ಮಾಲೀಕರು ಪ್ರಯಾಣಿಕರ ಸುಲಿಗೆ ಮುಂದುವರೆಸಿದ್ದಾರೆ.  ದೀಪಾವಳಿ ಹಬ್ಬಕ್ಕೂ ಖಾಸಗಿ ಬಸ್ ಪ್ರಯಾಣ ವಿಮಾನದಷ್ಟೇ ದುಬಾರಿಯಾಗಿವೆ. ದುಪ್ಪಟ್ಟು ವಸೂಲಿ ಮಾಡೋ ಬಸ್ ಮಾಲೀಕರ ಮೇಲೆ ಕ್ರಮ ಕೈಗೊಳ್ಳೊಕೆ ಹಿಂದೇಟು ಹಾಕ್ತಿದ್ದಾರೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ಪ್ರಯಾಣ ದರ ಬರೋಬ್ಬರಿ ₹5000 ಆಗಿದೆ. ಅಕ್ಬೋಬರ್ 22ರ 4ನೇ ಶನಿವಾರ ಸೇರಿ ದೀಪಾವಳಿಗೆ 5 ದಿನಗಳ‌ ಕಾಲ ಸಾಲು ಸಾಲು ರಜೆ ಇದ್ದ ಕಾರಣ ಖಾಸಗಿ ಬಸ್ ದರ ಯದ್ವಾತದ್ವಾ ಏರಿಕೆಯಾಗಿವೆ. ಸಾರಿಗೆ ಇಲಾಖೆ ಹಾಗೂ ಸಚಿವರು ಹೆಸರಿಗಷ್ಟೇ ಕ್ರಮದ ಭರವಸೆ ನೀಡಿ ಸುಮ್ಮನೆ ಆಗ್ತಿದ್ದಾರೆ. ಖಾಸಗಿ ಬಸ್​ಗಳ ಅಕ್ರಮಕ್ಕೆ ಸಾಥ್ ನೀಡುತ್ತಿದ್ಯಾ ಸಾರಿಗೆ ಇಲಾಖೆ ಎಂದು ಪ್ರಶ್ನೆ ಉದ್ಭವಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಫೋನ್‌ಕಾಲ್ ಮೂಲಕ ವಿಚಾರಣೆ ನಡೆಸಿದ ಸುಪ್ರೀಂ!