Publish Date: Wed, 19 Oct 2022 (15:41 IST)
Updated Date: Wed, 19 Oct 2022 (15:44 IST)
ಹಾಸ್ಟಲ್ ನಲ್ಲಿ ಚಿತ್ರಾನ್ನ ಸೇವಿಸಿದ 40 ಕಾಲೇಜು ವಿದ್ಯಾರ್ಥಿಗಳಿಗೆ ಫುಡ್ ಪಾಯ್ಸನ್ ಆಗಿರುವ ಘಟನೆ ಕೋಲಾರದ ದೊಡ್ಡಹಸಾಳದಲ್ಲಿರೋ LLB ಕಾಲೇಜು ಹಾಸ್ಟೆಲ್ನಲ್ಲಿ ನಡೆದಿದೆ. ಚಿತ್ರಾನ್ನ ಸೇವಿಸಿದ ಹಾಸ್ಟೆಲ್ ವಿದ್ಯಾರ್ಥಿಗಳು ಅಸ್ವಸ್ಥರಾದ ಪರಿಣಾಮ ವಿದ್ಯಾರ್ಥಿಗಳನ್ನು ಕೋಲಾರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಲ್ಲಿ ಬಿದ್ದ ಊಟ ಸೇವಿಸಿದ ಪರಿಣಾಮ ಫುಡ್ ಪಾಯ್ಸನ್ ಆಗಿರುವ ಮಾಹಿತಿ ಕಂಡುಬಂದಿದ್ದು, ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಟ್ಟಿಲ್ಲ ಅಂತಾ ಗಲಾಟೆ ಮಾಡಿದ್ದಾರೆ.