Select Your Language

Notifications

webdunia
webdunia
webdunia
webdunia

ಮೈಸೂರಲ್ಲಿ JDS - BRS ರಣತಂತ್ರ

ಮೈಸೂರಲ್ಲಿ JDS
Mysore , ಬುಧವಾರ, 19 ಅಕ್ಟೋಬರ್ 2022 (15:32 IST)
ಇಂದು ಮತ್ತೆ ನಾಳೆ ಮೈಸೂರಿನಲ್ಲಿ ಜೆಡಿಎಸ್ ಸಂಘಟನಾ ಕಾರ್ಯಾಗಾರ ನಡೆಯಲಿದೆ. ತೆಲಂಗಾಣ ಸಚಿವರು  ಕಾರ್ಯಾಗಾರದಲ್ಲಿ ಭಾಗಿಯಾಗುತ್ತಿದ್ದಾರೆ. ತೆಲಂಗಾಣ ಸಿಎಂ ಕೆಸಿಆರ್ ಪುತ್ರ ಕೆ.ಟಿ.ರಾಮರಾವ್ ಸೇರಿದಂತೆ ಎಂಟು ಮಂದಿ ಸಚಿವರು ಭಾಗಿ ಮೈಸೂರಿಗೆ ಆಗಮಿಸಿದ್ದಾರೆ. ಜೆಡಿಎಸ್‌, ಬಿಆರ್‌ಎಸ್‌ ಮೈತ್ರಿ, ಚುನಾವಣಾ ಪ್ರಚಾರ ಕುರಿತಂತೆ ಮಹತ್ವದ ಸಭೆ ನಡೆಯಲಿದ್ದು, ಆಂಧ್ರ, ತೆಲಾಂಗಣ ಗಡಿ ಭಾಗದಲ್ಲಿ ಯಾವ ವಿಚಾರಗಳಿಗೆ ಆದ್ಯತೆ ಕೊಡಬೇಕು, ವಿಧಾನಸಭಾ, ಲೋಕಸಭಾ ಚುನಾವಣೆಯಲ್ಲಿ ಪರಸ್ಪರ ಬೆಂಬಲ ನೀಡುವ ಬಗ್ಗೆ ಗಂಭೀರ ಚರ್ಚೆ ನಡೆಯಲಿದೆ. ಮತದಾರರನ್ನ ಸೆಳೆಯಲು ಯಾವ ಸ್ಟ್ರಾಟಜಿ ಮಾಡಬೇಕು‌, ವಿಶೇಷವಾಗಿ ರೈತಬಂಧು, ದಲಿತ ಬಂಧು ಕಾರ್ಯಕ್ರಮಗಳ ಬಗ್ಗೆ ತೆಲಂಗಾಣ ಸಚಿವರು  ವಿವರಿಸಲಿದ್ದಾರೆ. ಈಗಾಗಲೇ ಹಲವು ಬಾರಿ ಸಿಎಂ KCR  ಭೇಟಿ ಮಾಡಿರುವ ಮಾಜಿ ಸಿಎಂ ಹೆಚ್ ಡಿಕೆ ಹಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಇನ್ನು ಕಾರ್ಯಾಗಾರದಲ್ಲಿ 126 ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳು ಭಾಗಿಯಾಗಲಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಸಾವರ್ಕರ್ ಬಗ್ಗೆ ಮಾತನಾಡೋದು ರಾಜಕೀಯ ಪ್ರೇರಿತ