Select Your Language

Notifications

webdunia
webdunia
webdunia
webdunia

ಸಿದ್ದು ವಿರುದ್ಧ ಮಾಜಿ ಸಚಿವ ಈಶ್ವರಪ್ಪ ಕಿಡಿ

ಸಿದ್ದು ವಿರುದ್ಧ ಮಾಜಿ ಸಚಿವ ಈಶ್ವರಪ್ಪ ಕಿಡಿ
kodagu , ಭಾನುವಾರ, 16 ಅಕ್ಟೋಬರ್ 2022 (16:03 IST)
ಕೊಡಗಿನ ಮೇಲೆ ಪೆಟ್ರೋಲ್ ಬಾಂಬ್ ಹಾಕಿ ಹಿಂದೂಗಳ ನರಮೇಧ ಮಾಡುವ ಆಡಿಯೋ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಕೆ.ಎಸ್​​.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಶಹಾಪುರದಲ್ಲಿ ಮಾತನಾಡಿದ ಅವರು, ರಾಷ್ಟ್ರದ್ರೋಹಿಗಳನ್ನು ಬೆಳಸಿದವರು ಯಾರು.. ಈ ಹಿಂದೆ ಕಾಂಗ್ರೆಸ್​​ ಸರ್ಕಾರ ಇದ್ದಾಗ ಗೋವುಗಳನ್ನು ಕಳ್ಳತನ ಮಾಡಿದ್ದರು. ಗೋವುಗಳ ರಕ್ಷಣೆಗೆ ಮುಂದಾಗಿದ್ದ ಹಿಂದೂ ಯುವಕರ ಕಗ್ಗೊಲೆ ಆಗಿತ್ತು. ಗೂಂಡಾಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕಿತ್ತು. ಆದ್ರೆ ಸಿದ್ದರಾಮಯ್ಯನವರು PFI, SDPIಯನ್ನು ಬೆಳೆಸಿದರು. ಅಷ್ಟೇ ಅಲ್ಲದೆ ಮುಸಲ್ಮಾನರ ವೋಟಿಗಾಗಿ ಸಿದ್ದರಾಮಯ್ಯ, ರಾಷ್ಟ್ರಭಕ್ತರನ್ನ ಜೈಲಿಗೆ ಕಳುಹಿಸಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ. ರಾಷ್ಟ್ರದ್ರೋಹಿಗಳನ್ನು ಮಟ್ಟ ಹಾಕೋದು ಪ್ರಧಾನಿ ಮೋದಿ ಅವರಿಗೆ ಗೊತ್ತಿದೆ ಎಂದು ಈಶ್ವರಪ್ಪ ತಿರುಗೇಟು ನೀಡಿದರು. 

Share this Story:

Follow Webdunia kannada

ಮುಂದಿನ ಸುದ್ದಿ

16ನೇ ದಿನದ ಯಶಸ್ವಿ ಜೋಡೊ ಯಾತ್ರೆ