ಬೆಳ್ತಂಗಡಿ: ಹವಾಮಾನ ಇಲಾಖೆ ಮುನ್ಸೂಚನೆಯಂತೆ ಇಂದು ದಕ್ಷಿಣ ಕನ್ನಡದ ಹಲೆವೆಡೆ ಗಾಳಿ, ಸಿಡಿಲು ಸಹಿತ ಆಲಿಕಲ್ಲು ಮಳೆಯಾಗುತ್ತಿದೆ. ಬೆಳಗ್ಗೆಯಿಂದ ಉರಿಬಿಸಿಲನ ವಾತಾವರಣದಿಂದ ಸುಸ್ತಾಗಿದ್ದ ಜನತೆಗೆ ಇದೀಗ ವರುಣ ತಂಪೆರೆದಿದ್ದಾನೆ.
ಕರಾವಳಿ ಭಾಗ ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆಯಾಗುವ ಮುನ್ಸೂಚನೆಯಂತೆ ಹವಾಮಾನ ಇಲಾಖೆ ನೀಡಿತ್ತು. ಅದರಂತೆ ಇದೀಗ ಮಳೆಯಾಗುತ್ತಿದೆ.
ಬೆಳ್ತಂಗಡಿ ತಾಲ್ಲೂಕಿನ ಬೆಳ್ತಂಗಡಿ ಆಸುಪಾಸಿನ ಗ್ರಾಮಗಳು, ನಾರಾವಿ, ಅಂಡಿಂಜೆ ಮೊದಲಾದ ಕಡೆಗಳಲ್ಲಿ ಗಾಳಿ ಹಾಗೂ ಗುಡುಗು ಸಿಡಿಲಿನಿಂದ ಕೂಡಿದ ಮಳೆಯಾಗಿದೆ. ಗಾಳಿಯ ಅಬ್ಬರವೂ ಜೋರಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಬುಧವಾರ ದಿನವಿಡಿ ವಿಪರೀತ ಬಿಸಿಲಿನಿಂದ ಕೂಡಿದ ವಾತಾವರಣದಿಂದ ಜನ ಮನೆಯಿಂದ ಹೊರಬರಲು ಹಿಂದೇಟು ಹಾಕಿದ್ದರು.
ಬೆಳ್ತಂಗಡಿ ತಾಲ್ಲೂಕಿನ ಕಾಶಿಪಟ್ಣದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ.