Select Your Language

Notifications

webdunia
webdunia
webdunia
webdunia

Karnataka Weather: ರಾಜ್ಯದ ಈ ಪ್ರದೇಶಗಳಲ್ಲಿ ಇಂದು ಮಳೆ ಗ್ಯಾರಂಟಿ

Karnataka Weather

Sampriya

ಬೆಂಗಳೂರು , ಭಾನುವಾರ, 6 ಏಪ್ರಿಲ್ 2025 (13:55 IST)
ಬೆಂಗಳೂರು: ರಾಜ್ಯರಾಜಧಾನಿ ಬೆಂಗಳೂರು ಸೇರಿದಂತೆ  ಕರ್ನಾಟಕದ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇನ್ನೂ ಚಾಮರಾಜನಗರ, ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ವಿಜಯನಗರ, ತುಮಕೂರು, ಶಿವಮೊಗ್ಗ, ರಾಮನಗರ, ಮಂಡ್ಯ, ಕೋಲಾರ, ಹಾಸನ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೊಪ್ಪಳ, ಹಾವೇರಿ, ಗದಗ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇಂದು ಮಳೆಯ ನಿರೀಕ್ಷೆಯಿದೆ.

ಬೇಗೂರು, ಕೃಷ್ಣರಾಜಸಾಗರ, ಗುಂಡ್ಲುಪೇಟೆಯಲ್ಲಿ ಭಾರಿ ಮಳೆಯಾಗಿದೆ. ಬಂಡೀಪುರ, ಭಾಗಮಂಡಲ, ಕೃಷ್ಣರಾಜಪೇಟೆ, ಎಚ್​ಡಿ ಕೋಟೆ, ಮಂಡ್ಯ, ಕೋಲಾರ, ಶ್ರೀರಂಗಪಟ್ಟಣ, ರಾಯಲ್ಪಾಡು, ಎಂಎಂ ಹಿಲ್ಸ್​, ಶಿಗ್ಗಾಂವ್, ಹಾವೇರಿ, ಹುಬ್ಬಳ್ಳಿ, ಕೆಆರ್ ನಗರ, ಚನ್ನರಾಯಪಟ್ಟಣ ಹಾಗೂ ಬೆಂಗಳೂರಿನ ಕೆಲ ಭಾಗಗಳಲ್ಲಿ ಮಳೆಯಾಗಿದೆ.

ಹವಾಮಾನ ಇಲಾಖೆ ಇಂದಿನವರೆಗೆ ರಾಜ್ಯದ ಹಲವೆಡೆ ಉತ್ತಮ ಮಳೆಯಾಗುವ ಮುನ್ಸೂಚನೆಯನ್ನು ನೀಡಿತ್ತು. ಅದರಂತೆ ಅಲ್ಲಲ್ಲಿ ಗಾಳಿ ಸಹಿತ ಉತ್ತಮ ಮಳೆಯಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

Ram Navami 2025: ಅಯೋದ್ಯೆ ರಾಮಮಂದಿರದಲ್ಲಿ ವಿಶೇಷಪೂಜೆ, ಹಬ್ಬದ ಸಡಗರ