ಮೈಸೂರು: ರಾಜ್ಯ ಕಾಂಗ್ರೆಸ್ ನಾಯಕತ್ವ ಕಚ್ಚಾಟದ ಬಗ್ಗೆ ಇಂದು ಮಾಜಿ ಸಚಿವ ಎಚ್ ವಿಶ್ವನಾಥ್ ಮಾತನಾಡಿದ್ದು, ಡಿಕೆ ಶಿವಕುಮಾರ್ ಕಟ್ಟಿರುವ ಮನೆಗೆ ಬಂದು ಸೇರಿಕೊಂಡವನು ಸಿದ್ದರಾಮಯ್ಯ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ವಿಶ್ವನಾಥ್, ರಾಜ್ಯ ರಾಜಕಾರಣದ ಬಗ್ಗೆ ವಿಶ್ಲೇಷಣೆ ನಡೆಸಿದ್ದಾರೆ. ವಿಧಾನಸಭೆ ಈಗ ಸಿನಿಮಾದಲ್ಲಿ ನೀಡುವ ಎ ಸರ್ಟಿಫಿಕೇಟ್ ಗೆ ಬಂದು ನಿಂತಿದೆ. ಮೊದಲು ಯು ಅಂದರೆ ಯೂನಿವರ್ಸಲ್ ಇತ್ತು. ಸದನದಲ್ಲಿ ಎಂಥಾ ಮಾತುಗಳು ಬರ್ತಾ ಇವೆ, ನೀವೇ ತೋರಿಸ್ತೀವಿ, ಥೂ.. ಥೂ.. ಜನ ಕ್ಯಾಕರಿಸಿ ಉಗೀತಾವ್ರೆ ನಿಮಗೆ ಎಂದಿದ್ದಾರೆ.
ಇನ್ನು ನಾಯಕತ್ವದ ಬದಲಾವಣೆ ಬಗ್ಗೆಯೂ ಅವರು ಮಾತನಾಡಿದ್ದು ಡಿಕೆ ಶಿವಕುಮಾರ್ ಪರವಾಗಿ ಮಾತನಾಡಿದ್ದಾರೆ. ಕಾಂಗ್ರೆಸ್ ಕಟ್ಟಿರೋನು ಅವನೊಬ್ಬನೇ ಡಿಕೆ ಶಿವಕುಮಾರ್. ಕಾಂಗ್ರೆಸ್ ಕಟ್ಟಿರೋನು ಕಣ್ರೀ ಅವನು. ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ ಕಟ್ಟಿರುವವರು. ನೀವು ಏನು ಮಾಡಿದ್ರು? ಡಿಕೆ ಶಿವಕುಮಾರ್ ಕಟ್ಟಿದ ಮನೆಗೆ ಬಂದು ಸೇರಿಕೊಂಡವನು ಸಿದ್ದರಾಮಯ್ಯ ಎಂದು ವಾಗ್ದಾಳಿ ನಡೆಸಿದ್ದಾರೆ.
ಡಿಕೆ ಶಿವಕುಮಾರ್ ಗೆ ಅವಕಾಶ ಮಾಡಿಕೊಡುವ ಬಗ್ಗೆ ಮಾತನಾಡಿದ ಅವರು ಸರ್ಕಾರ ರಚನೆಗೆ ಡಿಕೆಶಿ ಶ್ರಮ, ಕೊಡುಗೆ ಇಲ್ವಾ? 130 ಸೀಟು ಬಂದಿರುವುದರಲ್ಲಿ ಡಿಕೆಶಿ ಕೊಡುಗೆ ಇಲ್ವಾ? ಎಂದು ಪ್ರಶ್ನಿಸಿದ್ದಾರೆ.